ನೆಲಮಂಗಲ:ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಪ್ರವಾಸಿ ತಾಣ ಸಿದ್ದರಬೆಟ್ಟಕ್ಕೆ ಬಂದಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಕಲ್ಯಾಣಿಯಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ್ದಾರೆ.
ಓರ್ವನ ಜೀವ ಉಳಿಸಲು ಹೋಗಿ ಭಾರೀ ದುರಂತ: ಬೆಂಗಳೂರಿನ ಒಂದೇ ಕುಟುಂಬದ ಐವರ ಸಾವು! - undefined
ಪ್ರವಾಸಕ್ಕೆಂದು ಬಂದಿದ್ದ ಐವರು ಕಲ್ಯಾಣಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಸ್ನಾನಕ್ಕಿಳಿದ ಓರ್ವನ ರಕ್ಷಣೆಗೆ ಮುಂದಾದ ಇತರ ನಾಲ್ವರೂ ಕೂಡ ಕಲ್ಯಾಣಿಯಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.
ಐವರು ಸಾವು
ಬೆಂಗಳೂರಿನ ಅಲಿಖಾನ್ ಕುಟುಂಬದ ಮುಬಿನಾ, ಫರ್ವೀನ್ ತಾಜ್, ಮುನೀರ್ ಖಾನ್, ಸಲ್ಮಾನ್, ರೇಷ್ಮ ಎಂಬುವರು ಮೃತಪಟ್ಟವರು ಎನ್ನಲಾಗಿದೆ. ಮೊದಲಿಗೆ ಬಾಲಕ ಸ್ನಾನಕ್ಕೆಂದು ಕಲ್ಯಾಣಿ ಬಳಿ ತೆರಳಿದ್ದ. ಈ ವೇಳೆ ಕಾಲು ಜಾರಿ ಬಾಲಕ ನೀರಿನಲ್ಲಿ ಬಿದ್ದಿದ್ದು, ರಕ್ಷಣೆಗೆ ಕೂಗಿಕೊಂಡಿದ್ದಾನೆ. ಈ ವೇಳೆ ಆತನ ರಕ್ಷಣೆಗೆ ಬಂದ ಕುಟುಂಬದ ನಾಲ್ವರು ಸದಸ್ಯರೂ ಕೂಡ ಈಜಲು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಡಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಎಲ್ಲ ಮೃತದೇಹಗಳನ್ನ ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Last Updated : Apr 27, 2019, 8:57 PM IST