ಆನೇಕಲ್:ಬೆಂಗಳೂರು- ಹೊಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೆಟ್ಟದಾಸನಪುರದಲ್ಲಿ ರಾತ್ರಿ ಕರಡಿಯೊಂದು ಓಡಾಡಿರುವ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಲಭ್ಯವಾಗಿರುವ ದೃಶ್ಯದಲ್ಲಿ ಕಾಣುವಂತೆ ತಡರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಡಿ ಸುತ್ತಾಡಿದೆ. ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಕರಡಿ ಓಡಾಟದ ಸಿಸಿಟಿವಿ ದೃಶ್ಯ ಈ ಹಿಂದೆ ಬೆಟ್ಟದಾಸನಪುರದ ಸಮೀಪದ ಗ್ರಾಮಗಳಲ್ಲಿ ಕರಡಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ದೊಡ್ದ ಸುದ್ದಿಯಾಗಿತ್ತು. ಪದೇ ಪದೇ ಕರಡಿ ಗ್ರಾಮಗಳಿಗೆ ಲಗ್ಗೆಯಿಡುತ್ತಿರುವುದು ಅರಣ್ಯಾಧಿಕಾರಿಗಳಿಗೂ ತಲೆ ನೋವಾಗಿ ಪರಿಣಮಿಸಿದೆ. ಕಾಡಿನಲ್ಲಿ ಆಹಾರ ಸಿಗದೆ ಊರಿನ ಗುಡಿಗಳಲ್ಲಿ ಸಿಗುವ ಉಳಿದ ಪ್ರಸಾದ ಸೇರಿದಂತೆ ಇತರ ಆಹಾರ ಅರಸಿ ಇವುಗಳು ಗ್ರಾಮಗಳಿಗೆ ಬರುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.
ವೀಕ್ಷಿಸಿ: ಅಳದಂಗಡಿ ಸಮೀಪದ ಮನೆಯೊಂದರಲ್ಲಿ ಅವಿತಿದ್ದ ಕಾಳಿಂಗ ಸೆರೆ
ಈ ಹಿಂದೆ ಬನ್ನೇರುಘಟ್ಟದ ವನ್ಯಪ್ಯಾಣಿ ಸಂರಕ್ಷಣಾ ಕೇಂದ್ರದಿಂದ ಕರಡಿಯೊಂದು ತಪ್ಪಿಸಿಕೊಂಡಿದ್ದು, ಅದು ಇದುವರೆಗೂ ಪತ್ತೆಯಾಗದಿರುವುದು ಜನರನ್ನು ಚಿಂತೆಗೀಡು ಮಾಡಿದೆ.