ಬೆಂಗಳೂರು: ಗ್ರಾಮಾಂತರ ಭಾಗದಲ್ಲಿದ್ದ ನಕಲಿ ಕ್ಲಿನಿಕ್ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ದಾಳಿ ನಡೆಸಿತು. ಈ ವೇಳೆ ಕೆಲ ಕ್ಲಿನಿಕ್ಗಳಿಗೆ ಬೀಗ ಜಡಿಯಲಾಯಿತು.
ಬೆಂಗಳೂರು ಗ್ರಾಮಾಂತರ ಡಿಎಚ್ಒ ಯೋಗೇಶ್ ಗೌಡ ನೇತೃತ್ವದಲ್ಲಿ ದೇವನಹಳ್ಳಿಯ ಬೂದಿಗೆರೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಲಾಗಿದೆ. ಇಲ್ಲಿನ ಹನುಮಾನ್ ಪಾಲಿ ಕ್ಲಿನಿಕ್, ಪ್ರಸನ್ನ ಕ್ಲಿನಿಕ್, ಮಲ್ಲಿಕಾರ್ಜುನ ಕ್ಲಿನಿಕ್, ಶ್ರೀ ಲಕ್ಷ್ಮಿ ಡಿ ಕೇರ್ ಸೆಂಟರ್ , ಜಯಶ್ರೀ ಕ್ಲಿನಿಕ್ಗಳಲ್ಲಿ ಪರಿಶೀಲನೆ ನಡೆಸಲಾಯಿತು. ಕೆಲ ಕ್ಲಿನಿಕ್ಗಳಿಗೆ ಬೀಗವನ್ನೂ ಜಡಿಯಲಾಯಿತು.