ಕರ್ನಾಟಕ

karnataka

ETV Bharat / state

SSLC ಫಲಿತಾಂಶ.. ಹೊಸ ದಾಖಲೆ ಬರೆದ ಬೆಂಗಳೂರು ಗ್ರಾಮಾಂತರ!

ಮೊದಲ ಸ್ಥಾನ ಸ್ವಲ್ಪದರಲ್ಲೇ ತಪ್ಪಿ ಹೋಯ್ತು. ಕೇವಲ 1 ಪರ್ಸೆಂಟೇಜ್‌ನಲ್ಲಿ ನಂಬರ್ ಒನ್ ಸ್ಥಾನ ತಪ್ಪಿಹೋಯಿತು. ಆದರೆ, ಉತ್ತಮ ಎಫರ್ಟ್ ಇದೆ. 3ನೇ ಸ್ಥಾನ ಪಡೆದಿರುವುದು ನಮ್ಮ ಸಾಧನೆ. ಮುಂದಿನ ವರ್ಷ ನಂಬರ್ ಒನ್ ಸ್ಥಾನಕ್ಕೆ ಬರುತ್ತೇವೆ ಎಂಬ ವಿಶ್ವಾಸವನ್ನು ಸಿಇಒ ಲತಾರವರು ವ್ಯಕ್ತ ಪಡಿಸಿದರು.

ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲತಾ

By

Published : Apr 30, 2019, 10:23 PM IST

ಬೆಂಗಳೂರು:ಈ ಬಾರಿಯ ಎಸ್‍ಎಸ್‍ಎಲ್​ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಹಾಸನ ಮೊದಲ ಸ್ಥಾನ ಪಡೆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೂರನೇ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.

ಎಸ್‍ಎಸ್‍ಎಲ್​ಸಿ ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಎಸ್‍ಎಸ್‍ಎಲ್​ಸಿ ಫಲಿತಾಂಶದಲ್ಲಿ 14 ನೇ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ, ಉತ್ತರ ಕನ್ನಡ, ಉಡುಪಿ ಹಾಗೂ ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳನ್ನು ಬೀಟ್ ಮಾಡಿದೆ.

ಈವರೆಗೂ 10 ರ ಮೇಲಿದ್ದ ಫಲಿತಾಂಶ ಇದೇ ಮೊದಲ ಬಾರಿಗೆ ಜಿಲ್ಲೆಗೆ ಮೂರನೇ ಸ್ಥಾನ ದೊರೆತಿದೆ. ಪರಿಣಾಮ ಜಿಲ್ಲೆಯ ವಿದ್ಯಾರ್ಥಿಗಳು ಖುಷಿಪಟ್ಟಿದ್ದಾರೆ. ಕಳೆದ ಬಾರಿ ಶೇ.82.17 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಆದರೆ, ಈ ಬಾರಿ ಅದಕ್ಕಿಂತ ಉತ್ತಮ ಫಲಿತಾಂಶ ಬಂದಿದೆ. ಇದಕ್ಕೆಲ್ಲಾ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲತಾ ಅವರು ಪ್ರಮುಖ ಕಾರಣ ಎನ್ನಲಾಗಿದ್ದು, ಇವರ ಪರಿಶ್ರಮ ಮತ್ತು ಕಾರ್ಯವೈಖರಿಗೆ ಜಿಲ್ಲಾಧಿಕಾರಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲತಾ

ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್​ಸಿ ಪರೀಕ್ಷೆಗೆ 12166 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 10762 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2017-18 ನೇ ಸಾಲಿನಲ್ಲಿ 11938 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 9807 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 82.17 ಫಲಿತಾಂಶದೊಂದಿಗೆ ರಾಜ್ಯದಲ್ಲಿ 14ನೇ ಸ್ಥಾನ ಪಡೆದಿತ್ತು. ಅಲ್ಲದೇ ಎಸ್‍ಎಸ್‍ಎಲ್​ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನವ್ಯ ಹಾಗೂ ನಾಗೇಂದ್ರ 625 ಅಂಕಕ್ಕೆ 619 ಅಂಕ ಗಳಿಸುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಇಬ್ಬರು ಹಂಚಿಕೊಂಡಿದ್ದಾರೆ. ತಾಲೂಕುವಾರು ದೇವನಹಳ್ಳಿ 93.30%, ದೊಡ್ಡಬಳ್ಳಾಪುರ 79.69%, ಹೊಸಕೋಟೆ 89.6%, ನೆಲಮಂಗಲ 92.15% ಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ಜಿಗಿದಿದೆ.

ನಮ್ಮ ಜಿಲ್ಲೆ ಮುಂದೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುತ್ತದೆ ಎಂಬ ನಿರೀಕ್ಷೆ ಇದೆ. ನಾವು ಮತ್ತು ಶಾಲಾ ಶಿಕ್ಷಕರು ತುಂಬಾ ಶ್ರಮ ವಹಿಸಿದ್ದೇವೆ. ಟ್ಯೂಷನ್​ಗಳು ಮತ್ತು ಉತ್ತಮ‌ ಶಿಕ್ಷಣ ನೀಡುವಲ್ಲಿ ಸಫಲರಾಗಿದ್ದಾರೆ. ಮೊದಲ ಸ್ಥಾನ ಸ್ವಲ್ಪದರಲ್ಲೇ ತಪ್ಪಿ ಹೋಯ್ತು. ಕೇಲವ 1 ಪರ್ಸೆಂಟೇಜ್‌ನಿಂದ ನಂಬರ್ ಒನ್ ಸ್ಥಾನ ತಪ್ಪಿಹೋಯಿತು. ಆದರೆ, ಉತ್ತಮ ಎಫರ್ಟ್ ಇದೆ. ಮೂರನೇ ಸ್ಥಾನ ಪಡೆದಿರುವುದು ನಮ್ಮ ಸಾಧನೆ. ಮುಂದಿನ ವರ್ಷ ನಂಬರ್ ಒನ್ ಸ್ಥಾನಕ್ಕೆ ಬರುತ್ತೇವೆ ಎಂಬ ವಿಶ್ವಾಸವನ್ನು ಸಿಇಒ ಲತಾರವರು ವ್ಯಕ್ತ ಪಡಿಸಿದರು.

ಸಿಇಒ ಲತಾ ಅವರ ಕಾರ್ಯಕ್ಕೆ ಜಿಲ್ಲಾಧಿಕಾರಿ ಕರಿಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ನಮ್ಮ ಜಿಲ್ಲೆ ಮೊದಲ ಸ್ಥಾನಕ್ಕೆ ಬರಬೇಕು ಎಂದು ತೀರ್ಮಾನ ಮಾಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿತ್ತು. ಅದರಂತೆ ಸಿಇಒ ಮತ್ತು ಶಿಕ್ಷಕರು ಸೇರಿದಂತೆ ಎಲ್ಲಾ ಮಕ್ಕಳ ತಂದೆ ತಾಯಿಗಳ ಶ್ರಮದಿಂದ ಮೂರನೇ ಸ್ಥಾನ ಪಡೆದುಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಕರೀಗೌಡ ಹೇಳಿದ್ರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಇದೇ ಮೊದಲ ಬಾರಿಗೆ ಎಸ್‍ಎಸ್‍ಎಲ್​ಸಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದು ಅಚ್ಚರಿ ಎನಿಸಿದರೂ, ಉತ್ತಮ‌ ಸಾಧನೆ ಮಾಡಿದೆ.‌

ABOUT THE AUTHOR

...view details