ಕರ್ನಾಟಕ

karnataka

ETV Bharat / state

ಚಿನ್ನದ ಗಟ್ಟಿ ಕಳ್ಳ ಸಾಗಣೆ.. ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಅಕ್ರಮವಾಗಿ ಚಿನ್ನದ ಗಟ್ಟಿ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 13.11 ಲಕ್ಷ ರೂ. ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.

gold
ಚಿನ್ನದ ಗಟ್ಟಿ ಕಳ್ಳ ಸಾಗಣೆ

By

Published : Aug 27, 2022, 10:39 AM IST

ದೇವನಹಳ್ಳಿ: ಪ್ಲಾಸ್ಟಿಕ್ ಪಟ್ಟಿ ಸುತ್ತಿ ಅಕ್ರಮವಾಗಿ ಚಿನ್ನದ ಗಟ್ಟಿ ಸಾಗಣೆ ಮಾಡಲು ಯತ್ನಿಸಿದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು, ಆರೋಪಿಯಿಂದ 250 ಗ್ರಾಂ ತೂಕದ ಗೋಲ್ಡ್ ಬಾರ್ ವಶಕ್ಕೆ ಪಡೆದಿದ್ದಾರೆ.

ಆಗಸ್ಟ್ 26 ರಂದು ಕುವೈತ್​ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಆರೋಪಿಯಿಂದ 13,11,082 ಮೌಲ್ಯದ 249. 73 ಗ್ರಾಂ ತೂಕದ ಗೋಲ್ಡ್ ಬಾರ್ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ:ವಿಮಾನದಿಂದ ಇಳಿದ ಪ್ರಯಾಣಿಕನ ಒಳ ಉಡುಪಿನಲ್ಲಿತ್ತು 47.31 ಲಕ್ಷ ಮೌಲ್ಯದ ಚಿನ್ನದ ಗಟ್ಟಿ!

ABOUT THE AUTHOR

...view details