ದೇವನಹಳ್ಳಿ:ಎರಡು ಟೆಕ್ ಹಬ್ಗಳಾದ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಡುವೆ ಪ್ರಾರಂಭವಾದ ತಡೆರಹಿತ ವಿಮಾನ ಪ್ರಾರಂಭವಾದ ವೇಗದಲ್ಲೇ ನಿಂತು ಹೋಗಿದೆ. ಕೋವಿಡ್ ಮತ್ತು ಪ್ರಯಾಣಿಕರ ಕೊರತೆ ಇದಕ್ಕೆ ಕಾರಣವಾಗಿದೆ.
ದಕ್ಷಿಣ ಭಾರತವನ್ನು ಯುಎಸ್ನೊಂದಿಗೆ ಸಂಪರ್ಕಿಸುವ ಮೊದಲ ವಿಮಾನ ಮಾರ್ಗ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ, ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಯುಎಸ್ ಸಿಲಿಕಾನ್ ಸಿಟಿ ಸ್ಯಾನ್ ಫ್ರಾನ್ಸಿಸ್ಕೊ ನಡುವೆ ತಡೆರಹಿತ ನೇರ ವಿಮಾನಯಾನ ವ್ಯವಸ್ಥೆಯನ್ನು ಏರ್ ಇಂಡಿಯಾ ಪ್ರಾರಂಭಿಸಿ ಹೊಸ ದಾಖಲೆ ಸೃಷ್ಟಿಸಿತ್ತು.
2021ರ ಜನವರಿ 10 ರಂದು ಸ್ಯಾನ್ ಫ್ರಾನ್ಸಿಸ್ಕೊದಿಂದ ಹಾರಿದ AI 176 ವಿಮಾನ ಜನವರಿ 11ರ ಮುಂಜಾನೆ 3 ಗಂಟೆ ಸಮಯದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. 13,993 ಕಿ. ಮೀ ದೂರವನ್ನು 16 ತಾಸುಗಳಲ್ಲಿ ಕ್ರಮಿಸಿದ ವಿಮಾನ ವಿಶೇಷ ಸಾಧನೆ ಮಾಡಿತ್ತು. ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ಒಳಗೊಂಡಿದ್ದ ಏರ್ ಇಂಡಿಯಾ ವಿಮಾನದಲ್ಲಿ 4 ಮಹಿಳಾ ಪೈಲಟ್ಗಳು, 12 ಕ್ಯಾಬಿನ್ ಸಿಬ್ಬಂದಿಯೂ ಸಹ ಮಹಿಳೆಯರೇ ಆಗಿದ್ದು, 238 ಪ್ರಯಾಣಿಕರು ಮೊದಲ ವಿಮಾನಯಾನ ಸೇವೆ ಪಡೆದಿದ್ದರು.