ಕರ್ನಾಟಕ

karnataka

ETV Bharat / state

ಕೊರೊನಾ ಸಮಯದಲ್ಲಿ ಬಮೂಲ್ ನಿರ್ದೇಶಕನ ಬರ್ತ್ ಡೇ ದರ್ಬಾರ್ - Bamul Director B C Anand

ಹಾಲು ಶಿಥಲೀಕರಣ ಘಟಕದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ 2.2 ಲಕ್ಷ ಹಾಲು ಸಂಗ್ರಹವಾಗಲಿದೆ. ಸಂಸ್ಕರಣೆಗೊಂಡ ಹಾಲು ಬೆಂಗಳೂರಿಗೆ ರವಾನೆಯಾಗಲಿದೆ. ಅಲ್ಲಿ ಪ್ಯಾಕೇಟ್ ಆಗಿ ಆನಂತರ ಹಾಲು ಜನರಿಗೆ ವಿತರಣೆಯಾಗಲಿದೆ..

Bamool Director's Birthday celebration despite of Corona
ಕೊರೊನಾ ಸಮಯದಲ್ಲಿ ಬಮೂಲ್ ನಿರ್ದೇಶಕನ ಬರ್ತ್ ಡೇ ದರ್ಬಾರ್

By

Published : Jul 10, 2020, 8:25 PM IST

ದೊಡ್ಡಬಳ್ಳಾಪುರ :ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಆದರೆ, ದೊಡ್ಡಬಳ್ಳಾಪುರ ಕ್ಷೇತ್ರದ ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಮಾತ್ರ ಸರ್ಕಾರದ ಆದೇಶವನ್ನ ಗಾಳಿಗೆ ತೂರಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಕೊರೊನಾ ಸಮಯದಲ್ಲಿ ಬಮೂಲ್ ನಿರ್ದೇಶಕನ ಬರ್ತ್ ಡೇ ದರ್ಬಾರ್

ದೊಡ್ಡಬಳ್ಳಾಪುದ ಹಾಲಿನ ಡೈರಿ ಕಚೇರಿ ಅವರಣದಲ್ಲಿಯೇ ಬಿ ಸಿ ಆನಂದ್ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಮ್ಮ ಅಭಿಮಾನಗಳ ಜೊತೆ ಸೇರಿ ತಮ್ಮ ಹುಟ್ಟು ಹಬ್ಬದ ದರ್ಬಾರ್ ನಡೆಸಿದ್ದಾರೆ. ಅಷ್ಟೇ ಅಲ್ಲ, ಆಚರಣೆ ಯಾರೊಬ್ಬರೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಲ್ಲ ಎಂದು ತಿಳಿದು ಬಂದಿದೆ.

ಕೊರೊನಾ ಸಮಯದಲ್ಲಿ ಬಮೂಲ್ ನಿರ್ದೇಶಕನ ಬರ್ತ್ ಡೇ ದರ್ಬಾರ್

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. 10ಕ್ಕೂ ಹೆಚ್ಚು ಏರಿಯಾಗಳು ಸೀಲ್‌ಡೌನ್ ಆಗಿವೆ. ಈ ಸಮಯದಲ್ಲಿ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ತನ್ನ ಹುಟ್ಟುಹಬ್ಬವನ್ನ ಜನ ಸಮೂಹದೊಂದಿಗೆ ಆಚರಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಲು ಶಿಥಲೀಕರಣ ಘಟಕದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ 2.2 ಲಕ್ಷ ಹಾಲು ಸಂಗ್ರಹವಾಗಲಿದೆ. ಸಂಸ್ಕರಣೆಗೊಂಡ ಹಾಲು ಬೆಂಗಳೂರಿಗೆ ರವಾನೆಯಾಗಲಿದೆ. ಅಲ್ಲಿ ಪ್ಯಾಕೇಟ್ ಆಗಿ ಆನಂತರ ಹಾಲು ಜನರಿಗೆ ವಿತರಣೆಯಾಗಲಿದೆ. ಲಕ್ಷಾಂತರ ಜನ ಈ ಹಾಲನ್ನು ಸೇವನೆ ಮಾಡುತ್ತಾರೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಜನರು, ತಾಲೂಕು ಪಂಚಾಯತ್‌ ಸದಸ್ಯರು, ಗ್ರಾಮ ಪಂಚಾಯತ್‌ ಸದಸ್ಯರು ಸೇರಿ ಭರ್ಜರಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿರುವುದು ಇದೀಗ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.

ABOUT THE AUTHOR

...view details