ಕರ್ನಾಟಕ

karnataka

ETV Bharat / state

ಬಮೂಲ್​ನಿಂದ ಜನರಿಗೆ ಶುದ್ಧ ನೀರಿನ ಘಟಕದ ಕೊಡುಗೆ.. - ಹಾಲು ಮತ್ತು ಹಾಲಿನ ಉತ್ಪನ್ನಗಳ ಶುದ್ದತೆ

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಹನುಮಂತಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯ್ತು.

ಬಮೂಲ್​ನಿಂದ ಜನರಿಗೆ ಶುದ್ಧ ನೀರಿನ ಘಟಕದ ಕೊಡುಗೆ

By

Published : Sep 20, 2019, 7:57 AM IST

ನೆಲಮಂಗಲ:ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಹನುಮಂತಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸುಮಾರು 2 ಲಕ್ಷ ವೆಚ್ಚದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ನೆಲಮಂಗಲ ತಾಲೂಕು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಭಾಸ್ಕರ್ ಉದ್ಘಾಟಿಸಿದರು.

2018-19 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನಿರ್ದೇಶಕ ಭಾಸ್ಕರ್, ರೈತರು ಪರಿಶುದ್ಧ ಮತ್ತು ಗುಣಮಟ್ಟದ ಹಾಲನ್ನು ಬಮೂಲ್ (ಬೆಂಗಳೂರು ಹಾಲು ಉತ್ಪಾದಕರ ಸಂಘ ಒಕ್ಕೂಟ)ಗೆ ನೀಡಿದಾಗ ಮಾತ್ರ ಸಹಕಾರ ಸಂಘಗಳು ಹಾಗೂ ಬಮೂಲ್ ಎರಡು ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ ಎಂದರು.

ಬಮೂಲ್​ನಿಂದ ಜನರಿಗೆ ಶುದ್ಧ ನೀರಿನ ಘಟಕದ ಕೊಡುಗೆ..

ಹಾಲು ಮತ್ತು ಹಾಲಿನ ಉತ್ಪನ್ನಗಳ ಶುದ್ದತೆಯಲ್ಲಿ ಬಮೂಲ್ ಉತ್ತಮ ಸಾಧನೆ ಮಾಡಿದೆ ಎಂದ್ರು. ಕೇಂದ್ರ ಸರ್ಕಾರ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಚಿಂತನೆ ನಡೆಸಿದೆ.ರೈತರು ಒಂದಾಗಿ ಕೇಂದ್ರ ಸರ್ಕಾರದ ಆಮದು ನೀತಿ ಖಂಡಿಸಬೇಕಿದೆ. ಇಲ್ಲವಾದರೆ ಇಲ್ಲನ ಹೈನುಗಾರಿಕೆ ಉದ್ಯಮ ನಷ್ಟಕ್ಕೆ ಈಡಾಗಲಿದೆ ಎಂದರು.

ABOUT THE AUTHOR

...view details