ಚಿಕ್ಕಬಳ್ಳಾಪುರ:ಬಾವಿಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೋಂಡೆಬಾವಿ ಬಳಿ ಮುತ್ತಗಾದಹಳ್ಳಿಯಲ್ಲಿ ನಡೆದಿದೆ. ಮೃತ ಯುವಕನ್ನು ಅಲಿಪುರ ಗ್ರಾಮದ ಹರೀಶ್ (25) ಎಂದು ಗುರುತಿಸಲಾಗಿದೆ.
ಬಾವಿಯಲ್ಲಿ ಈಜಲು ಹೋಗಿ ಯುವಕ ನೀರು ಪಾಲು - ಗೌರಿಬಿದನೂರು
ಬಾವಿಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೋಂಡೆಬಾವಿ ಬಳಿಯ ಮುತ್ತಗಾದಹಳ್ಳಿಯಲ್ಲಿ ನಡೆದಿದೆ.
ನೀರು ಪಾಲು
ಈ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದ್ದು, ಸ್ಥಳಕ್ಕೆ ಪೋಲಿಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಯುವಕನ ಶವವನ್ನು ನೀರಿನಿಂದ ಹೊರೆಗೆ ತೆಗೆದಿದ್ದಾರೆ.
ಘಟನೆ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.