ದೊಡ್ಡಬಳ್ಳಾಪುರ:ಮಳೆ ಬಾರದೆ 20 ವರ್ಷಗಳಿಂದ ಬರಿದಾಗಿದ್ದ ಜಿಲ್ಲೆಯ ಕೊನಘಟ್ಟ ಕೆರೆ ತುಂಬಿ ಕೋಡಿಬಿದ್ದಿದ್ದು, ಕಂದಾಯ ಸಚಿವ ಆರ್. ಅಶೋಕ್ ಬಾಗಿನ ಅರ್ಪಿಸಿದರು.
ಕೊನಘಟ್ಟ ಕೆರೆಯ ದಂಡೆಯ ಮೇಲಿನ ಗ್ರಾಮದೇವತೆ ಮಾರ್ಗಾದಾಂಬ ದೇವಿಗೆ ಪೂಜೆ ಸಲ್ಲಿಸಿ, ಎರಡು ದಶಕಗಳ ನಂತರ ತುಂಬಿ ತುಳುಕುತ್ತಿರುವ ಕೆರೆಗೆ ಸಚಿವರು ಬಾಗಿನ ಅರ್ಪಿಸಿದರು. ಈ ವೇಳೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ.