ದೊಡ್ಡಬಳ್ಳಾಪುರ:ಗುಟ್ಕಾ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದವ ಮಹಿಳೆಗೆ ಚಾಕು ತೋರಿಸಿ ಮಾಂಗಲ್ಯಸರ ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳನನ್ನ ಹಿಡಿದ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗುಟ್ಕಾ ಖರೀದಿ ನೆಪದಲ್ಲಿ ಚಾಕು ತೋರಿಸಿ ಮಹಿಳೆಯ ಮಾಂಗಲ್ಯ ಸರ ಕದಿಯಲು ಯತ್ನ, ಕಳ್ಳನ ಬಂಧನ
ಮಹಿಳೆ ಕಿರುಚಿಕೊಂಡಾಗ ಗ್ರಾಮಸ್ಥರು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಹಗ್ಗದಲ್ಲಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಹೊಡೆದು ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಂತರ ಪೊಲೀಸರ ವಶಕ್ಕೆ ಕಳ್ಳನನ್ನು ಕೊಡಲಾಗಿದೆ..
ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಇಂದು ಮಧ್ಯಾಹ್ನ ಗ್ರಾಮದ ಭ್ರಮಾರಂಬಿಕೆ ಎಂಬ ಮಹಿಳೆ ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡುವಾಗ, ಅಂಗಡಿಗೆ ಬಂದ ಕಳ್ಳನೊಬ್ಬ ಗುಟ್ಕಾ ಕೇಳಿದ್ದಾನೆ. ತಕ್ಷಣವೇ ಅಂಗಡಿ ಒಳಗೆ ನುಗ್ಗಲು ಯತ್ನಿಸಿದ್ದಾನೆ. ಬಳಿಕ ಕಳ್ಳ ಚಾಕು ತೋರಿಸಿ ಆಕೆಯನ್ನ ಬೆದರಿಸಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ಕೊಂಡ ಪರಾರಿಯಾಗಲು ಯತ್ನಿಸಿದ್ದಾನೆ.
ಕೂಡಲೇ ಮಹಿಳೆ ಕಿರುಚಿಕೊಂಡಾಗ ಗ್ರಾಮಸ್ಥರು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಹಗ್ಗದಲ್ಲಿ ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಹೊಡೆದು ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಂತರ ಪೊಲೀಸರ ವಶಕ್ಕೆ ಕಳ್ಳನನ್ನು ಕೊಡಲಾಗಿದೆ. ದಿನೇ ದಿನೇ ಸರಗಳ್ಳತ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆ ಕೈಗೆ ಸಿಕ್ಕ ಕಳ್ಳನ ಮೇಲೆ ಗ್ರಾಮಸ್ಥರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.