ಆನೇಕಲ್: ಒಂಟಿ ಮನೆಯಲ್ಲಿ ವಾಸವಾಗಿದ್ದ ವೃದ್ಧ ದಂಪತಿ ಮೇಲೆ ದರೋಡೆಕೋರರು ಲಾಂಗ್ ಹಿಡಿದು ಹಲ್ಲೆಗೆ ಯತ್ನ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಕಂಡ ತಮಿಳುನಾಡಿನ ಜನತೆ ಬೆಚ್ಚಿಬಿದ್ದಿದ್ದಾರೆ.
ಕಳ್ಳರೊಡನೆ ಸೆಣಸಾಡಿ ಜೀವ ಉಳಿಸಿಕೊಂಡ ವೃದ್ಧ ದಂಪತಿ... ಸಿಸಿಟಿವಿಯಲ್ಲಿ ದೃಶ್ಯ ಸೆರೆ - ತಮಿಳುನಾಡಿನ ಜನತೆ
ವೃದ್ಧ ದಂಪತಿ ಮೇಲೆ ದರೋಡೆಕೋರರು ಲಾಂಗ್ಗಳನ್ನು ಹಿಡಿದು ಹಲ್ಲೆಗೆ ಯತ್ನ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಕಂಡ ತಮಿಳುನಾಡಿನ ಜನತೆ ಬೆಚ್ಚಿಬಿದ್ದಿದ್ದಾರೆ.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕಡೈ ತಾಲೂಕಿನ ಕಲ್ಯಾಣಪುರ ಗ್ರಾಮದ ಒಂಟಿ ಮನೆಯಲ್ಲಿ ಘಟನೆ ನಡೆದಿದೆ. ಮನೆಯ ಮಾಲೀಕ ವೃದ್ಧ ಷಣ್ಮುಗಂ ಮನೆಯ ಹೊರಾಂಗಣದಲ್ಲಿ ಕುಳಿತಿದ್ದರು. ಈ ವೇಳೆ ದರೋಡೆಕೋರರು ಅವರ ಕುತ್ತಿಗೆಯ ಭಾಗಕ್ಕೆ ಬಟ್ಟೆ ಹಾಕಿ ಕಂಬಕ್ಕೆ ಕಟ್ಟಲು ಯತ್ನಿಸಿದ್ದಾರೆ. ವೃದ್ಧ ಷಣ್ಮುಗಂ ಕಿರುಚುವ ಧ್ವನಿ ಕೇಳಿ ಹೊರಬಂದ ಪತ್ನಿ, ಕೈಗೆ ಸಿಕ್ಕಿದ ಚಪ್ಪಲಿ, ಕುರ್ಚಿಗಳನ್ನು ದರೋಡೆಕೋರರ ಮೇಲೆ ಎಸೆದಿದ್ದಾರೆ.
ಇದರಿಂದ ರೊಚ್ಚಿಗೆದ್ದ ದರೋಡೆಕೋರರು ಲಾಂಗ್ನಿಂದ ಹಲ್ಲೆಗೈಯ್ಯಲು ಯತ್ನಿಸುತ್ತಾರೆ. ಈ ವೇಳೆ ಎದೆಗುಂದದ ದಂಪತಿ ಕೈಗೆ ಸಿಕ್ಕದ್ದನ್ನೆಲ್ಲ ದರೋಡೆಕೋರರ ಮೇಲೆ ಎಸೆದು ಜೀವ ಉಳಿಸಿಕೊಂಡಿದ್ದಾರೆ. ಈ ಕುರಿತು ಕಡೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.