ಕರ್ನಾಟಕ

karnataka

ETV Bharat / state

ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವಂಚನೆ: ಮೂವರು ಖದೀಮರ ಬಂಧನ - doddaballapura police

ಅವಿದ್ಯಾವಂತ ಮತ್ತು ಹಳ್ಳಿಯಿಂದ ಬರುವ ಎಟಿಎಂ ಗ್ರಾಹಕರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

arrested accused
ಬಂಧಿತ ಆರೋಪಿಗಳು

By

Published : Apr 16, 2021, 10:55 AM IST

ದೊಡ್ಡಬಳ್ಳಾಪುರ: ಎಟಿಎಂ ಗ್ರಾಹಕರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಡೆಬಿಟ್ ಕಾರ್ಡ್​ಗಳನ್ನು ಪಡೆದು, ಕ್ಷಣಾರ್ಧದಲ್ಲೇ ಬದಲಾಯಿಸಿ ಯಾಮಾರಿಸುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಶಿವಪುರ ಗ್ರಾಮದ ಮಂಜುನಾಥ್ (29), ಮಲ್ಲೇಶ್ (42), ಮುರುಳಿ (29) ಬಂಧಿತರು.

ಮಂಜುನಾಥ್ ಎಂಬಾತ ತಮಿಳುನಾಡಿನ ಹೊಸೂರು ಮತ್ತು ಗೌರಿಬಿದನೂರು ಕಳ್ಳತನ ಮಾಡಿ, ಜೈಲು ಶಿಕ್ಷೆ ಅನುಭವಿಸಿದ್ದ.

ಹೀಗೆ ನಡೆಯುತ್ತೆ ವಂಚನೆ..

ಪ್ರಕರಣ-1

ಗೌಡಹಳ್ಳಿ ಗ್ರಾಮದ ಸೀನಪ್ಪ ಎಂಬುವವರು ಏಪ್ರಿಲ್​ 1ರಣದು ದೊಡ್ಡಬಳ್ಳಾಪುರನಗರದ ಡಿಕ್ರಾಸ್ ಬಳಿಯ ಎಸ್​ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಂದಿದ್ದರು. ಈ ವೇಳೆ ಅವರ ಬಳಿಯಿದ್ದ ಡೆಬಿಟ್ ಕಾರ್ಡ್ ಕೆಳಗೆ ಬಿದ್ದಿದ್ದು, ಹಿಂದೆ ನಿಂತಿದ್ದ ವ್ಯಕ್ತಿ ಪಾಸ್​ವರ್ಡ್ ತಿಳಿದುಕೊಂಡು ಕಾರ್ಡ್ ಎತ್ತಿಕೊಡುವ ನೆಪದಲ್ಲಿ ಅದಲು-ಬದಲು ಮಾಡಿದ್ದಾನೆ. ಬಳಿಕ ಆ ಕಾರ್ಡ್​ನಿಂದ ಯಲಹಂಕ ಮತ್ತು ದೊಡ್ಡಬಳ್ಳಾಪುರದಲ್ಲಿ ಶಾಪಿಂಗ್ ಮಾಡಿ, 1 ಲಕ್ಷ ದ 48 ಸಾವಿರ ಹಣ ಖರ್ಚು ಮಾಡಿದ್ದಾನೆ. ಏಪ್ರಿಲ್ 3ರಂದು ಸೀನಪ್ಪ ಬ್ಯಾಂಕ್​ ನಲ್ಲಿ ವಿಚಾರಿಸಿದಾಗ ವಂಚನೆ ಬಗ್ಗೆ ತಿಳಿದಿದ್ದು, ಈ ಬಗ್ಗೆ ದೂರು ನೀಡಿದ್ದರು.

ಪ್ರಕರಣ-2

ಮಾರ್ಚ್ 27ರಂದು ನಗರದ ಕೆನರಾ ಬ್ಯಾಂಕ್ ಎಟಿಎಂಗೆ ಬಂದ ರಾಘವೇಂದ್ರ ಎಂಬುವವರು, ಅಲ್ಲೇ ಇದ್ದ ವ್ಯಕ್ತಿಯೋರ್ವನಿಗೆ 500 ರೂ. ಡ್ರಾ ಮಾಡಿಕೊಡುವಂತೆ ತಿಳಿಸಿದ್ದಾರೆ. 500 ರೂ. ಡ್ರಾ ಮಾಡಿಕೊಡುವ ವೇಳೆ ಆತ ಕಾರ್ಡ್ ಬದಲಿಸಿ, ನಕಲಿ ಕಾರ್ಡ್ ಕೊಟ್ಟಿದ್ದಾನೆ. ಬಳಿಕ ಆ ಕಾರ್ಡ್​ನಿಂದ 27 ಸಾವಿರ ರೂ. ಎಗರಿಸಿದ್ದ.

ಇದನ್ನೂ ಓದಿ:ಶೌಚಾಲಯ ತೆರವಿಗೆ ವಿರೋಧ: ಸೀಮೆಎಣ್ಣೆ ಸುರಿದು ಮಹಿಳೆಯಿಂದ ಆತ್ಮಹತ್ಯೆ ಯತ್ನ

ಬಂಧಿತರಿಂದ 66 ಸಾವಿರ ನಗದು, ಎಟಿಎಂ ಕಾರ್ಡ್​ಗಳು ಮತ್ತು 9 ಗ್ರಾಂ ಚಿನ್ನದ ಉಂಗುರ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಎಟಿಎಂಗೆ ಬರುವ ಅವಿದ್ಯಾವಂತ ಮತ್ತು ಹಳ್ಳಿಗರನ್ನೇ ಟಾರ್ಗೆಟ್​ ಮಾಡಿ ವಂಚಿಸುತ್ತಿದ್ದರು.

ABOUT THE AUTHOR

...view details