ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ):ಮಹಿಳೆಯ ಜೊತೆ ಯುವಕನ ಸಂಬಂಧದ ಬಗ್ಗೆ ಸಂಶಯಪಟ್ಟ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಕೆಲದಿನಗಳ ಹಿಂದೆ ಇದೇ ರೀತಿಯ ಕಾರಣಕ್ಕೆ ಆರು ಜನ ಸೇರಿ ಕೊಲೆ ಮಾಡಿದ್ದರು. ಈಗ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ರಕ್ಷಣೆಯಿಂದ ಯುವಕ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದಾನೆ.
30 ಜನರ ಗುಂಪಿನಿಂದ ಯುವಕನ ಮೇಲೆ ಹಲ್ಲೆ:ಚಿಕ್ಕಬಳ್ಳಾಪುರ ಜಿಲ್ಲೆಯ ಗೌಚೇನಹಳ್ಳಿಯ 20 ವರ್ಷದ ಯುವಕ ಆಕಾಶ್ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾನೆ. ಕಳೆದ ಸೋಮವಾರ ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್ಗೆ ಬಂದ ಆಕಾಶ್ನನ್ನು 30 ಜನರ ಗುಂಪು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದೆ. ರಾಡು, ದೊಣ್ಣೆ, ಕಲ್ಲು ಮತ್ತು ಮುಳ್ಳಿನ ತಂತಿಯಿಂದ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾರೆ. ಹೊಲದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಲ್ಲದೆ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಸಕಾಲಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಆಕಾಶ್ನನ್ನು ಕಾಪಾಡಿದ್ದಾರೆ.
ಹಲ್ಲೆಗೆ ಕಾರಣವಾದ ಮಹಿಳೆ ಜೊತೆಗಿನ ಮೊಬೈಲ್ ಮಾತುಕತೆ:ಹಲ್ಲೆಗೊಳಗಾದ ಯುವಕ ಆಕಾಶ್ ಮತ್ತು ಮೆಳೆಕೋಟೆ ಕ್ರಾಸ್ನ ನಿವಾಸಿ ಮಾರುತಿ ಡೈವರ್ ಕೆಲಸ ಮಾಡುತ್ತಿದ್ದರು. ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಸ್ನೇಹಿತರಾಗಿದ್ದರು. ಗಂಡನ ಯೋಗಕ್ಷೇಮ ವಿಚಾರಿಸಲೆಂದ್ದು ಮಾರುತಿ ಪತ್ನಿ ಆಕಾಶ್ಗೆ ಆಗಾಗ ಪೋನ್ ಮಾಡುತ್ತಿದ್ದಾರಂತೆ.