ದೊಡ್ಡಬಳ್ಳಾಪುರ :ಹಳೇ ದ್ವೇಷದ ಹಿನ್ನೆಲೆ ಗಾಂಜಾ ವ್ಯಸನಿ ಯುವಕರ ಗ್ಯಾಂಗ್ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ.
ಗೋವಿಂದರಾಜ್ ಹಲ್ಲೆಗೊಳಗಾದ ಯುವಕ. ಕಟ್ಟಡ ಕೆಲಸ ಮಾಡುತ್ತಿದ್ದ ಈತನ ಮೇಲೆ ಗಾಂಜಾ ವ್ಯಸನಿಗಳಾದ ಅಂಬರೀಶ, ವೀರೇಶ್, ಪ್ರಶಾಂತ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸ್ಥಳೀಯರಿಂದ ಪ್ರತಿಭಟನೆ ಕೆಲಸಕ್ಕೆ ಹೋಗದೇ ಗಾಂಜಾ ಸೇದುವುದು, ಹುಡುಗಿಯರನ್ನು ಚುಡಾಯಿಸುವುದು ರಾತ್ರಿ ಕುಡಿದು ರಸ್ತೆಯಲ್ಲಿ ಪಟಾಕಿ ಹೊಡೆಯುವುದು ಸೇರಿದಂತೆ ದುಶ್ಚಟಗಳ ದಾಸರಾಗಿದ್ದ ಆರೋಪಿಗಳಿಂದ ಸಾರ್ವಜನಿಕರಿಗೆ ನಿತ್ಯ ಕಿರಿ ಕಿರಿ ಉಂಟಾಗುತ್ತಿತ್ತು. ಯುವಕರ ಉಪಟಳದಿಂದ ಬೇಸತ್ತ ಗೋವಿಂದರಾಜ್, ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವಕರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಸರಿಯಾಗಿ ಬೆಂಡೆತ್ತಿ ಕಳುಹಿಸಿದ್ದರು. ಈ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಿದ ಗೋವಿಂದರಾಜ್ ಮೇಲೆ ಯುವಕರಿಗೆ ದ್ವೇಷವಿತ್ತು. ಹೀಗಾಗಿ ಗೋವಿಂದರಾಜ್ ದೇವಸ್ಥಾನದ ಕಟ್ಟಡ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ಧಾರೆ.
ಘಟನೆಯಿಂದ ಆಕ್ರೋಶಗೊಂಡ ಬಸವೇಶ್ವರ ನಗರದ ನಿವಾಸಿಗಳು, ಆರೋಪಿಗಳನ್ನು ಬಂಧಿಸುವಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.