ಆನೇಕಲ್:ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಎಸ್ಐ ಅಕಾಲಿಕ ಮರಣ ಹೊಂದಿದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣವರ್ ಹಾಗೂ ಸಿಬ್ಬಂದಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ಎಎಸ್ಐ ಅಕಾಲಿಕ ಮರಣ: ಎಸ್ಪಿ ರವಿ ಡಿ ಚನ್ನಣವರ್ ಶ್ರದ್ಧಾಂಜಲಿ - kannad news
ಕಾಯಿಲೆಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸರ್ಜಾಪುರ ಎಎಸ್ಐ ಅಶೋಕ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಎಸ್ಪಿ ರವಿ ಡಿ ಚೆನ್ನಣವರ್ ಮತ್ತು ಸಿಬ್ಬಂದಿ ವರ್ಗ ಶ್ರದ್ದಾಂಜಲಿ ಸಲ್ಲಿಸಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಉಪ ವಿಭಾಗ ಸರ್ಜಾಪುರ ಪೊಲೀಸ್ ಠಾಣೆ ಎಎಸ್ಐ ಅಶೋಕ್ ಸಹಜ ಕಾಯಿಲೆಗೆ ತುತ್ತಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದ್ದಿದ್ದಾರೆ.
ಮೃತ ಎಎಸ್ಐ ಅಶೋಕ್ ಅಂತಿಮ ದರ್ಶನ ಪಡೆದ ಬಳಿಕ ಎಸ್ಪಿ ರವಿ ಡಿ ಚನ್ನಣ್ಣವರ್ ಮಾತನಾಡಿ, ಮೃತ ಎಎಸ್ಐ ಅಶೋಕ್ ನಮ್ಮ ಜಿಲ್ಲೆಯಲ್ಲಿ 34 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ ಇಂದು ಅಕಾಲಿಕ ಮರಣ ಹೊಂದಿದ್ದು, ಇಲಾಖೆ ಒಬ್ಬ ಒಳ್ಳೆಯ ಅಧಿಕಾರಿಯನ್ನು ಕಳೆದಿಕೊಂಡಿದೆ. ಅಶೋಕ್ ಅವರ ಕುಟುಂಬದೊಂದಿಗೆ ಸದಾ ನಾವು ಇರುತ್ತೇವೆ ಎಂದು ಹೇಳಿದರು.