ಕರ್ನಾಟಕ

karnataka

ETV Bharat / state

ರೋಮ್​ನಿಂದ ಬೆಂಗಳೂರಿಗೆ ಆಗಮಿಸಿದ ಅಮ್ಲಜನಕ ತಯಾರಕ ಜಿಯೋಲೈಟ್

ರೋಮ್​ನಿಂದ ಮೊದಲ ಹಂತದ ಆಮ್ಲಜನಕ ತಯಾರಕ ಜಿಯೋಲೈಟ್ಅನ್ನು ಹೊತ್ತು ಎರಡು ಏರ್ ಇಂಡಿಯಾ ವಿಮಾನಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ.

Arrival from Rome to GeoLite Bangalore
ರೋಮ್​ನಿಂದ ಉತ್ಪಾದನೆಗೆ ಬಳಸುವ ಜಿಯೋಲೈಟ್ ಬೆಂಗಳೂರಿಗೆ ಆಗಮನ

By

Published : May 16, 2021, 9:36 PM IST

ದೇವನಹಳ್ಳಿ: ಆಮ್ಲಜನಕ ತಯಾರಿಕೆಗೆ ಬೇಕಾದ ಜಿಯೋಲೈಟ್ ರೋಮ್​ನಿಂದ ಆಮದು ಮಾಡಿಕೊಳ್ಳಲಾಗಿದ್ದು, 34,200 ಕಿಲೋ ಗ್ರಾಂ ಜಿಯೋಲೈಟ್ ಹೊತ್ತ ಎರಡು ಏರ್ ಇಂಡಿಯಾ ವಿಮಾನಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ.

ರೋಮ್​ನಿಂದ ಉತ್ಪಾದನೆಗೆ ಬಳಸುವ ಜಿಯೋಲೈಟ್ ಬೆಂಗಳೂರಿಗೆ ಆಗಮನ

ಭಾರತದಲ್ಲಿ ಆಮ್ಲಜನಕ ಸಿಲಿಂಡರ್​ ಕೊರತೆಯಿಂದ ಕೊರೊನಾ ಸೊಂಕಿತರ ಸಾವು ಹೆಚ್ಚಾಗುತ್ತಿದೆ. ಆಮ್ಲಜನಕ ತಯಾರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ. ಖಾಸಗಿ ಸಂಸ್ಥೆಗಳು ಸಹ ಆಮ್ಲಜನಕ ತಯಾರಿಕೆಗೆ ಮುಂದಾಗಿವೆ. ಈ ಜಿಯೋಲೈಟ್​ಗಳು ಗಾಳಿಯಲ್ಲಿರುವ ಆಮ್ಲಜನಕವನ್ನು ಸಂಕುಚಿತಗೊಳಿಸುತ್ತವೆ.

ರೋಮ್​ನಿಂದ ಬೆಂಗಳೂರಿಗೆ ಆಗಮಿಸಿತು ಆಮ್ಲಜನಕ ಉತ್ಪಾದನೆಗೆ ಬಳಸುವ ಜಿಯೋಲೈಟ್

ಸಂಕುಚಿತಗೊಂಡ ಆಮ್ಲಜನಕ ಜಿಯೋಲೈಟ್ ಮೂಲಕ ಹಾದು ಹೋಗುವಂತೆ ಮಾಡಲಾಗುತ್ತೆ. ಜಿಯೋಲೈಟ್ ಗಾಳಿಯಲ್ಲಿನ ಸಾರಜನಕವನ್ನು ಹೀರಿಕೊಳ್ಳುತ್ತದೆ. ಕೊನೆಯಲ್ಲಿ ಆಮ್ಲಜನಕ ಸಂಗ್ರಹವಾಗುತ್ತೆ. ಈ ಆಮ್ಲಜನಕ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಕೊರೊನಾ ಸೋಂಕಿತರ ಆಕ್ಸಿಜನ್ ಕೊಡಲು ಬಳಸಲಾಗುತ್ತದೆ.

ಆಮ್ಲಜನಕ ಉತ್ಪಾದನೆಗೆ ಬಳಸುವ ಜಿಯೋಲೈಟ್ ರೋಮ್​ನಿಂದ ಬೆಂಗಳೂರಿಗೆ ಆಗಮನ

For All Latest Updates

ABOUT THE AUTHOR

...view details