ಕರ್ನಾಟಕ

karnataka

ETV Bharat / state

ಫುಟ್​ಪಾತ್​ಗೆ ಗುದ್ದಿದ ಶಾಲಾ ಬಸ್​: ಬಾಶೆಟ್ಟಿಹಳ್ಳಿ ರೈಲ್ವೆ ಮೇಲ್ಸೇತುವೆ ಮೇಲೆ ಮತ್ತೊಂದು ಅವಘಡ - ಶಾಲಾ ಬಸ್ಸೊಂದು ಪುಟ್ ಬಾತ್ ಗೆ ಡಿಕ್ಕಿ

ಬಾಶೆಟ್ಟಿಹಳ್ಳಿ ರೈಲ್ವೆ ಮೇಲ್ಸೇತುವೆ ಕಳಪೆ ಕಾಮಗಾರಿಯಿಂದ ನಿರ್ಮಿತವಾಗದ್ದು, ಇದೀಗ ಮತ್ತೆ ಶಾಲಾ ಬಸ್ಸೊಂದು ಫುಟ್​ಪಾತ್​​ಗೆ ನುಗ್ಗಿದ ಘಟನೆ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಶಾಲಾ ಬಸ್​ ಡಿಕ್ಕಿ

By

Published : Sep 26, 2019, 6:26 PM IST

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ರೈಲ್ವೆ ಮೇಲ್ಸೇತುವೆ ಕಳಪೆ ಕಾಮಗಾರಿಯಿಂದ ನಿರ್ಮಿತವಾಗದ್ದು, ಇದೀಗ ಮತ್ತೆ ಶಾಲಾ ಬಸ್ಸೊಂದು ಫುಟ್​ಪಾತ್​​ಗೆ ನುಗ್ಗಿದ ಘಟನೆ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಆಂಗ್ಲ ಶಾಲೆಯ ವಾಹನವು ಶಾಲೆಯಿಂದ ಮಕ್ಕಳನ್ನು ಮನೆಗೆ ಬಿಟ್ಟು ವಾಪಸ್​ ಬರುವಾಗ ಈ ಘಟನೆ ನಡೆದಿದೆ. ಬಾಶೆಟ್ಟಿಹಳ್ಳಿ ಬಳಿಯ ರೈಲ್ವೆ ಮೇಲ್ಸೇತುವೆ ಮೇಲೆ ವೇಗವಾಗಿ ಬರುವಾಗ ಹಂಪ್ ಅಡ್ಡಿಯಾಯ್ತು ನಿಯಂತ್ರಣ ಕಳೆದುಕೊಂಡು ಚಾಲಕ ಫುಟ್​ಪಾತ್​ಗೆ ಗುದ್ದಿದ್ದ ರಭಸಕ್ಕೆ ಶಾಲಾ ವಾಹನದ ಮುಂಭಾಗ ಜಖಂಗೊಂಡಿದೆ. ಅದೃಷ್ಟಕ್ಕೆ ವಾಹನದಲ್ಲಿ ಮಕ್ಕಳು ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಘಟನೆಗೆ ಅವೈಜ್ಞಾನಿಕವಾಗಿ ರೈಲ್ವೆ ಮೇಲ್ಸೇತುವೆ ಮೇಲೆ ಹಾಕಲಾಗಿರುವ ಹಂಪ್ ಕಾರಣವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ. ಈ ಹಿಂದೆ ರೈಲ್ವೆ ಮೇಲ್ಸೇತುವೆಯ ತಡೆಗೋಡೆಗಳು ಕಳಚಿ ಬಿದ್ದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details