ದೊಡ್ಡಬಳ್ಳಾಪುರ: ಅಣ್ಣಾಮಲೈ ಒಬ್ಬ ದೊಡ್ಡ ವ್ಯಕ್ತಿ. ಈ ರಾಜ್ಯ ಮತ್ತು ಪೊಲೀಸ್ ಇಲಾಖೆ ಬಿಟ್ಟಿದ್ದು ದೊಡ್ಡ ನಷ್ಟ, ಅವರು ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿಯಾಗಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹೇಳಿದ್ದಾರೆ.
ಅಣ್ಣಾಮಲೈ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ : ರವಿ ಡಿ. ಚನ್ನಣ್ಣನವರ್ - Police Department
ಅಣ್ಣಾಮಲೈ ರಾಜ್ಯ ಮತ್ತು ಪೊಲೀಸ್ ಇಲಾಖೆ ಬಿಟ್ಟಿದ್ದು ದೊಡ್ಡ ನಷ್ಟ. ಅವರಿಗೊಂದು ಬಹು ದೊಡ್ಡ ಕನಸಿದೆ, ಆ ಕನಸಿಗೆ ನಾವು ಬೆಂಬಲ ನೀಡೋಣ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹೇಳಿದರು.
![ಅಣ್ಣಾಮಲೈ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ : ರವಿ ಡಿ. ಚನ್ನಣ್ಣನವರ್](https://etvbharatimages.akamaized.net/etvbharat/prod-images/768-512-4433726-thumbnail-3x2-hrs.jpg)
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುವಾಗ, ವಿದ್ಯಾರ್ಥಿಯೊಬ್ಬ ಅಣ್ಣಾಮಲೈ ರಾಜೀನಾಮೆ ಕೊಡಲು ರಾಜಕೀಯ ಒತ್ತಡ ಕಾರಣವೇ ಎಂದು ಪ್ರಶ್ನಿಸಿದ್ದಾನೆ. ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದಚನ್ನಣ್ಣನವರ್, ಅಣ್ಣಾಮಲೈ ಒಬ್ಬ ದೊಡ್ಡ ವ್ಯಕ್ತಿ. ಈ ರಾಜ್ಯ ಮತ್ತು ಪೊಲೀಸ್ ಇಲಾಖೆಯನ್ನು ಅವರು ಬಿಟ್ಟಿದ್ದು ದೊಡ್ಡ ನಷ್ಟವಾಗಿದೆ. ಅಂತವರು ಬಹಳ ಅಪರೂಪ, ನನ್ ಬಗ್ಗೆ ನೀವು ಎಷ್ಟು ಮಾತನಾಡುತ್ತೀರೋ, ಅದರ ಶೇಕಡಾ 10ರಷ್ಟು ಮಾತ್ರ ಇದ್ದೇನೆ ಎಂದರು.
ಅಣ್ಣಾಮಲೈ ಅವರಿಗೊಂದು ಬಹು ದೊಡ್ಡ ಕನಸಿದೆ, ಆ ಕನಸಿಗೆ ನಾವು ಬೆಂಬಲ ನೀಡೋಣ. ಅಂತಿಮವಾಗಿ ಅವರು ಸಾರ್ವಜನಿಕ ಸೇವೆಗೆ ಬರಲಿದ್ದಾರೆ. ನಾನೂ ಕೂಡ ರಾಜೀನಾಮೆ ನೀಡುತ್ತೇನೆ ಎಂದು ಅಂದುಕೊಳ್ಳಬೇಡಿ. ಸದ್ಯ ನಾನು ಫುಲ್ ಫಾರ್ಮ್ನಲ್ಲಿದ್ದೇನೆ. ಐಪಿಎಸ್ ಮತ್ತು ಐಎಎಸ್ ಹುದ್ದೆಗಳಿಂದ ಸಾವಿರಾರು ಜನರಿಗೆ ಸಹಾಯ ಮಾಡಬಹುದು. ಈ ಹುದ್ದೆಯಲ್ಲಿದ್ದು ನಾನು ಜನಕ್ಕೆ ಸಹಾಯ ಮಾಡುವುದಾಗಿಚನ್ನಣ್ಣನವರ್ ಹೇಳಿದರು.