ನೆಲಮಂಗಲ:ಬೆಂಗಳೂರು ಉತ್ತರ ತಾಲೂಕಿನ ಹುಣ್ಣಿಗೆರೆ ಗ್ರಾಮದಲ್ಲಿ ಬೈಕ್ ರಿಪೇರಿ ಮಾಡುವ ಸೋಗಿನಲ್ಲಿ ವೃದ್ಧೆಯ ಮಾಂಗಲ್ಯಸರ ದೋಚಿರುವ ಘಟನೆ ನಡೆದಿದೆ.
ಬೈಕ್ ರಿಪೇರಿ ಮಾಡುವ ಸೋಗಿನಲ್ಲಿ ವೃದ್ಧೆ ಮಾಂಗಲ್ಯಸರ ದೋಚಿದ ಸರಗಳ್ಳರು - chain snatching
ಬಸ್ನಿಂದ ಇಳಿದು ಹೋಗುತ್ತಿದ್ದ ವೇಳೆ ಮುಸುಕುದಾರಿಗಳಿಬ್ಬರು 70 ವರ್ಷ ವಯಸ್ಸಿನ ವೃದ್ಧೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
![ಬೈಕ್ ರಿಪೇರಿ ಮಾಡುವ ಸೋಗಿನಲ್ಲಿ ವೃದ್ಧೆ ಮಾಂಗಲ್ಯಸರ ದೋಚಿದ ಸರಗಳ್ಳರು bng](https://etvbharatimages.akamaized.net/etvbharat/prod-images/768-512-5177049-thumbnail-3x2-bng.jpg)
ಮಾಂಗಲ್ಯಸರ ಕಳೆದುಕೊಂಡ ಪಾರ್ವತಮ್ಮ.
ಪಾರ್ವತಮ್ಮ (70) ಎಂಬುವವರ ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಪಾರ್ವತಮ್ಮ ಬಸ್ ಇಳಿದು ಮನೆಗೆ ಹೋಗುತ್ತಿದ್ದ ಸಮಯದಲ್ಲಿ ವೃದ್ಧೆ ಹಿಂಬಾಲಿಸಿದ ಇಬ್ಬರು ಮುಸುಕುದಾರಿಗಳು ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ರಿಪೇರಿ ಮಾಡಿಕೊಳ್ಳುವ ಸೋಗಿನಲ್ಲಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲಾಗಿದೆ.