ದೊಡ್ಡಬಳ್ಳಾಪುರ :ಡಿಸೆಂಬರ್ 6 ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿಬ್ಬಾಣದ ಅಂಗವಾಗಿ ಮೌಢ್ಯ ಕಂದಚಾರ ವಿರೋಧಿ ದಿನಾಚರಣೆಯನ್ನ ಸ್ಮಶಾನದಲ್ಲಿ ಆಚರಣೆ ಮಾಡಲಾಗಿದೆ. ಸ್ಮಶಾನದಲ್ಲಿ ಬಾಡೂಟ ಮಾಡುವ ಮೂಲಕ ಸ್ಮಶಾನ ಕೆಡಕನ್ನು ಉಂಟು ಮಾಡದ ಸ್ಥಳವೆಂದು ದಲಿತ ಸಂಘಟನೆಗಳು ಸಾಬೀತು ಮಾಡಿದವು.
ತಾಲೂಕಿನ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನವನ್ನು ಮೌಢ್ಯ ಮತ್ತು ಕಂದಾಚಾರ ದಿನವನ್ನಾಗಿ ಆಚರಿಸಿದರು. ನಗರದ ರೋಜಿಪುರದ ಸಾರ್ವಜನಿಕ ಸ್ಮಶಾನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಚಿಂತಕ ಯೋಗೇಶ್ ಮಾಸ್ಟರ್, ಪತ್ರಕರ್ತ ವೆಂಕಟೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ದೆವ್ವಗಳ ಪ್ರಭಾವಕ್ಕೆ ಒಳಗಾಗುತ್ತೇವೆ ಎಂಬ ಕಾರಣಕ್ಕೆ ಜನರು ಸ್ಮಶಾನಕ್ಕೆ ಹೋಗುವುದಕ್ಕೆ ಹೆದರುತ್ತಾರೆ. ಜನರ ಮೂಢ ನಂಬಿಕೆಯನ್ನ ದೂರ ಮಾಡಲು ಸ್ಮಶಾನದಲ್ಲಿಯೇ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ಸ್ಮಶಾನದಲ್ಲಿಯೇ ಬಾಡೂಟ ಮಾಡುವ ಮೂಲಕ ಸ್ಮಶಾನ ಕೆಡಕನ್ನು ಮಾಡದ ಸ್ಥಳವೆಂದು ಸಾಬೀತು ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿಂತಕ ಯೋಗೇಶ್ ಮಾಸ್ಟರ್ ಮಾಧ್ಯಮದೊಂದಿಗೆ ಮಾತನಾಡಿ, ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನವನ್ನು ಸಾಂಕೇತಿಕವಾಗಿ ಮೌಢ್ಯ ಮತ್ತು ಕಂದಾಚಾರ ವಿರೋಧಿ ದಿನಾಚರಣೆ ಉತ್ತಮ ನಡೆಯಾಗಿದೆ.