ನೆಲಮಂಗಲ: ಸಿಮೆಂಟ್ ಶೀಟ್ ಒಡೆದು ಬಾರ್‌ನಲ್ಲಿದ್ದ ಮದ್ಯ ಕಳ್ಳತನ ಮಾಡಿರುವ ಪ್ರಕರಣ ನೆಲಮಂಗಲ ಸಮೀಪದ ಗುಡೇಮಾರನಹಳ್ಳಿಯಲ್ಲಿ ನಡೆದಿದೆ.
ಕಳ್ಳರ ಕಾರು'ಬಾರು': 40 ಸಾವಿರ ಮೌಲ್ಯದ ಎಣ್ಣೆಯೊಂದಿಗೆ ಪರಾರಿ - bar in nelmangala
ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪವಿರುವ ಗುಡೇಮಾರನಹಳ್ಳಿಯ ವೆಂಕಟೇಶ್ವರ ಬಾರ್‌ನಲ್ಲಿ ಸುಮಾರು 40 ಸಾವಿರ ಮೌಲ್ಯದ ಮದ್ಯ ಕಳುವಾಗಿದೆ.
40 ಸಾವಿರ ಮೌಲ್ಯದ ಮದ್ಯ ಎಗರಿಸಿದ ಕಳ್ಳರು
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಹತಾಶರಾಗಿ ಕಳೆದ ರಾತ್ರಿ ಬಾರ್‌ಗೆ ಕನ್ನ ಹಾಕಿದ್ದಾರೆ. ಈ ವೇಳೆ 40 ಸಾವಿರ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳನ್ನು ಕದ್ದು ಪರಾರಿಯಾಗಿದ್ದಾರೆ.
ಗುಡೇಮಾರನಹಳ್ಳಿ ಊರ ಹೊರವಲಯದಲ್ಲಿ ಈ ಬಾರ್ ಮತ್ತು ರೆಸ್ಟೋರೆಂಟ್ ಇದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ.