ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಕಾಂಗ್ರೆಸ್​ ಮುಖಂಡರಿಂದ ಸ್ವಾಗತ - Kharge arrived to the Karnataka

ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ತವರಿಗೆ ಆಗಮಿಸಿದರು. ಕೆಐಎಎಲ್​​ನಲ್ಲಿ ಕಾಂಗ್ರೆಸ್​​ ಮುಖಂಡರು ಸ್ವಾಗತಿಸಿದರು.

AICC President Mallikarjun Kharge
ರಾಜ್ಯಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

By

Published : Nov 6, 2022, 1:24 PM IST

ದೇವನಹಳ್ಳಿ: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗು ಕೆ ಹೆಚ್ ಮುನಿಯಪ್ಪ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರೂ ಜಮಾಯಿಸಿದ್ದರು. ಖರ್ಗೆಯವರ ತವರು ಜಿಲ್ಲೆ ಕಲಬುರಗಿಯ ಅನೇಕ ಕಾರ್ಯಕರ್ತರು ಏರ್‌ಪೋರ್ಟ್​ನಲ್ಲಿ ಸೇರಿದ್ದರು. ಸ್ವಾಗತಕ್ಕೆಂದೇ ಸಾದಹಳ್ಳಿಗೇಟ್ ಬಳಿ ವೇದಿಕೆ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ:'ಕೈ' ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಶುರು; ಬಂಡಾಯ ಸ್ಪರ್ಧೆಗಿಲ್ಲ ಅವಕಾಶ

ಏರ್ ಪೋರ್ಟ್ ರಸ್ತೆಯಿಂದ ಅರಮನೆ ಮೈದಾನದವರೆಗೂ ಖರ್ಗೆಯವರಿಗೆ ಸ್ವಾಗತ ಕೋರುವ ಬೃಹತ್ ಕಟೌಟ್​​ಗಳು ತಲೆ ಎತ್ತಿವೆ. ಒಂದು ಬದಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಕಟೌಟ್​ಗಳು, ಮತ್ತೊಂದು ಬದಿಯಲ್ಲಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಕಟೌಟ್​ಗಳು ರಾರಾಜಿಸುತ್ತಿವೆ.

ABOUT THE AUTHOR

...view details