ಕರ್ನಾಟಕ

karnataka

ETV Bharat / state

ಏರೋ ಇಂಡಿಯಾ: ಕೆಐಎಎಲ್​​ನಲ್ಲಿ ವಾಣಿಜ್ಯ ವಿಮಾನಗಳ ಸೇವೆಯಲ್ಲಿ ವ್ಯತ್ಯಯ - ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಫೆಬ್ರವರಿ 8 ರಿಂದ 17ರವರೆಗೆ ಏರೋ ಇಂಡಿಯಾ 2023 ನಡೆಯಲಿದ್ದು, ಏರ್ಪೋರ್ಟ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಲಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಏರೋ ಇಂಡಿಯಾ ಶೋ
ಏರೋ ಇಂಡಿಯಾ ಶೋ

By

Published : Feb 7, 2023, 9:38 PM IST

ದೇವನಹಳ್ಳಿ : ಯಲಹಂಕದ ಏರ್‌ಫೋರ್ಸ್ ಸ್ಟೇಷನ್​​ನಲ್ಲಿ ಫೆಬ್ರವರಿ 13 ರಿಂದ 17ರವರೆಗೆ 5 ದಿನಗಳ ಏರೋ ಇಂಡಿಯಾ-2023ರ ವೈಮಾನಿಕ ಪ್ರದರ್ಶನ ನಡೆಯಲಿದೆ. ವಿಮಾನಗಳ ತಾಲೀಮು ಫೆಬ್ರವರಿ 8 ರಿಂದಲೇ ಶುರುವಾಗಲಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಸುರಕ್ಷತೆಯ ದೃಷ್ಟಿಯಿಂದ ಕೆಐಎಎಲ್​ನ ವಿಮಾನಗಳ ಸೇವೆಯಲ್ಲಿ ಕೆಲ ಸಮಯ ವ್ಯತ್ಯಯವಾಗಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಏರ್ಪೋರ್ಟ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಲಿದೆ. ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರು ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.

ವಾಣಿಜ್ಯ ವಿಮಾನಗಳ ಹಾರಾಟ ವೇಳಾಪಟ್ಟಿ

ಫೆಬ್ರವರಿ 8 ರಿಂದ 11: ಬೆಳಗ್ಗೆ 9 ರಿಂದ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ
ಫೆಬ್ರವರಿ 12 ಮತ್ತು 13: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ
ಫೆಬ್ರವರಿ 14 ಮತ್ತು 15: ಮಧ್ಯಾಹ್ನ 12 ರಿಂದ 2.30 ರವರೆಗೆ
ಫೆಬ್ರವರಿ 15 ಮತ್ತು 17: ಬೆಳಗ್ಗೆ 9. 30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ

ಏರೋ ಇಂಡಿಯಾ ಶೋ

ಏರೋ ಇಂಡಿಯಾ ಶೋ:ಏರೋ ಇಂಡಿಯಾಗೆ ಪಾಲಿಕೆ ಎಲ್ಲ ರೀತಿಯಲ್ಲಿ ಸಿದ್ಧತೆ ಕೈಗೊಂಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈಗಾಗಲೇ ಹೇಳಿದ್ದಾರೆ. ಜನವರಿ 27ರಂದು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಅವರು, ಯಲಹಂಕದ ವಾಯುನೆಲೆಯಲ್ಲಿ ನಡೆಯುವ ಏರ್‌ ಶೋ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದರು.

ಸ್ವಚ್ಛತೆ, ಆಗಮಿಸುವ ನಾಗರಿಕರಿಗೆ ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳನ್ನು ಬಿಬಿಎಂಪಿ ವತಿಯಿಂದ ಕಲ್ಪಿಸಲಾಗುತ್ತಿದೆ. ಯಲಹಂಕ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದೇ ರೀತಿ ಈ ವ್ಯಾಪ್ತಿಯ ಮಾಂಸದಂಗಡಿಗಳನ್ನೂ ಮುಚ್ಚುವ ಸಂಬಂಧ ಅಧಿಕೃತ ಆದೇಶವನ್ನು ಶೀಘ್ರದಲ್ಲಿಯೇ ಹೊರಡಿಸಲಾಗುವುದು ಎಂದಿದ್ದರು.

ಇದನ್ನೂ ಓದಿ:ಏರೋ ಇಂಡಿಯಾ ಶೋಗೆ ಸಿದ್ಧತೆ: ಯಲಹಂಕ ವಲಯದಲ್ಲಿ ಜ. 30ರಿಂದ ಮಾಂಸ ಮಾರಾಟ ನಿಷೇಧ

ABOUT THE AUTHOR

...view details