ನೆಲಮಂಗಲ: ಸ್ಯಾಂಡಲ್ವುಡ್ ನಟಿ ಶೃತಿ ಅವರ ಮಾಜಿ ಕಾರು ಚಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
25 ವರ್ಷದ ಮಂಜುನಾಥ್ ಸಿಂಗ್ ನೇಣಿಗೆ ಶರಣಾದಾತ. ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಮಾಚೋಹಳ್ಳಿ ಅರಣ್ಯ ಪ್ರದೇಶದಲ್ಲಿ ಈತ ನೇಣಿಗೆ ಶರಣಾಗಿದ್ದಾನೆ. ಈತ ಆರು ತಿಂಗಳ ಹಿಂದೆಯಷ್ಟೇ ಶೃತಿ ಅವರ ಕಾರು ಚಾಲನೆ ಕೆಲಸ ಬಿಟ್ಟಿದ್ದನಂತೆ. ಮಂಗಳವಾರ ಮನೆಯಿಂದ ಹೊರಹೋದಾತ ಬುಧವಾರ ಹೆಣವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.