ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಮನೆ ಮುಂದೆ ನಿಂತಿದ್ದ ವೃದ್ದೆಯ ಸರಗಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿರುವ ಘಟನೆ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಎದುರು ಮನೆ ಮುಂದೆ ಬೈಕ್ ನಿಲ್ಲಿಸಿದ ಇಬ್ಬರು ಯಾರನ್ನೋ ಕೇಳುವ ನೆಪದಲ್ಲಿ ನಡೆದುಕೊಂಡು ಬಂದು ಮನೆಯ ಹೊರಗಿದ್ದ ವೃದ್ಧೆ ವಿಜಯಮ್ಮ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡು ಕ್ಷಣಾರ್ಧದಲ್ಲೇ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗುವ ವೇಳೆ, 20 ಗ್ರಾಂನಷ್ಟು ಸರ ತುಂಡಾಗಿ ಬಿದ್ದಿದೆ.