ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತದಲ್ಲಿ ವ್ಯಕ್ತಿ ದುರ್ಮರಣ.. ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ - 48 ವರ್ಷದ ಮುನಿರಾಜು

ನೆಲಮಂಗಲ ತಾಲ್ಲೂಕಿನ ತಾಳೇಕೆರೆ ಗ್ರಾಮದ ನಿವಾಸಿ 48 ವರ್ಷದ ಮುನಿರಾಜು ಮೃತ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆಯ ಸಮಯದಲ್ಲಿ ಮನೆಗೆ ರೇಷನ್​ ತರಲೆಂದು ಮುನಿರಾಜುರವರು ಟಿ.ಬೇಗೂರು ಗ್ರಾಮಕ್ಕೆ ತಮ್ಮ​ ಬೈಕ್​ನಲ್ಲಿ ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 48 ರ ಟಿ.ಬೇಗೂರು ಬಳಿ ಹಿಂದಿನಿಂದ ಬಂದ ಕೋಳಿ ಸಾಗಾಣಿಕೆ ವಾಹನವು ಏಕಾಏಕಿ ಮುನಿರಾಜು ಅವರಿಗೆ ಡಿಕ್ಕಿ ಹೊಡೆದಿತ್ತು.

Muniraju died in an accident
ಅಪಘಾತದಲ್ಲಿ ಮೃತಗೊಂಡ ಮುನಿರಾಜು

By

Published : Dec 17, 2022, 12:38 PM IST

ನೆಲಮಂಗಲ: ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಹಿಂದಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರೈತ ಸಾವನ್ನಪ್ಪಿರುವ ಘಟನೆ ಬೇಗೂರು ಬಳಿ ನಡೆದಿದೆ. ಇಂಥನ ಸಾವಿನಲ್ಲೂ ರೈತನ ನೇತ್ರದಾನ ಮಾಡುವ ಮೂಲಕ ಮೃತರ ಕುಟುಂಬ ಸಾರ್ಥಕತೆ ಮೆರೆದಿದೆ.

ನೆಲಮಂಗಲ ತಾಲೂಕಿನ ತಾಳೇಕೆರೆ ಗ್ರಾಮದ ನಿವಾಸಿ 48 ವರ್ಷದ ಮುನಿರಾಜು ಮೃತರು. ನಿನ್ನೆ ಸಂಜೆ 4 ಗಂಟೆಯ ಸಮಯದಲ್ಲಿ ಮನೆಗೆ ರೇಷನ್​ ತರಲೆಂದು ಮುನಿರಾಜು ಅವರು ಟಿ.ಬೇಗೂರು ಗ್ರಾಮಕ್ಕೆ ತನ್ನ ಟಿವಿಎಸ್​ ಎಕ್ಸ್​ಎಲ್​ ಬೈಕ್​ನಲ್ಲಿ ಹೋಗುತ್ತಿರಬೇಕಾದರೆ ರಾಷ್ಟ್ರೀಯ ಹೆದ್ದಾರಿ 48 ರ ಟಿ.ಬೇಗೂರು ಬಳಿಯಲ್ಲಿ ಹಿಂದಿನಿಂದ ಬಂದ ಕೋಳಿ ಸಾಗಾಣಿಕೆ ವಾಹನವು ಏಕಾಏಕಿ ಮುನಿರಾಜುವಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಮುನಿರಾಜುವಿಗೆ ಹಿಂಬದಿ ತಲೆಗೆ ತೀವ್ರವಾದ ಪೆಟ್ಟಾಗಿ ವಿಪರೀತ ರಕ್ತಸ್ರಾವವಾಗಿದೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9:40ಕ್ಕೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ದುಃಖದ ಮಡುವಿನಲ್ಲಿದ್ದರು ಸಹ ಕುಟುಂಬದವರು ಮೃತರ ಎರಡೂ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಇದನ್ನೂ ಓದಿ:300 ರೂ ಸಾಲ ಪಡೆದು ವಾಪಸ್​ ನೀಡದ ಅಣ್ಣ.. ಸಹೋದರನನ್ನು ಕೊಂದೇಬಿಟ್ಟ ತಮ್ಮ

ABOUT THE AUTHOR

...view details