ಬೆಂಗಳೂರು:ಸ್ನೇಹಿತನ ಬರ್ತ್ಡೇ ಪಾರ್ಟಿ ಮುಗಿಸಿ ನಂದಿ ಬೆಟ್ಟಕ್ಕೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ 3 ಜನ ಸ್ಥಳದಲ್ಲೇ ಮೃತಪಟ್ಟು, 4 ಜನ ಗಂಭೀರವಾಗಿ ಗಾಯಗೊಂಡ ಘಟನೆ ದೇವನಹಳ್ಳಿಯ ಹಂದರಹಳ್ಳಿ ಬಳಿ ನಡೆದಿದೆ.
ಗೆಳೆಯನ ಬರ್ತ್ಡೇ ಪಾರ್ಟಿ ಮುಗಿಸಿ ಟ್ರಿಪ್ ಹೊರಟವರಿಗಾಗಿ ಕಾದು ಕುಳಿತಿದ್ದ ಜವರಾಯ! - ಬರ್ತ್ಡೇ ಪಾರ್ಟಿ
ಸ್ನೇಹಿತನ ಬರ್ತ್ಡೇ ಪಾರ್ಟಿ ಮುಗಿಸಿ ನಂದಿ ಬೆಟ್ಟಕ್ಕೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವನಹಳ್ಳಿಯ ಹಂದರಹಳ್ಳಿ ಬಳಿ ಅಪಘಾತ ಸಂಭವಿಸಿದೆ.
ಸ್ನೇಹಿತರೆಲ್ಲಾ ಸೇರಿ ವೀಕೆಂಡ್ ಟ್ರಿಪ್ ಎಂಜಾಯ್ ಮಾಡಲು ಕಾರಿನಲ್ಲಿ ನಂದಿ ಬೆಟ್ಟಕ್ಕೆ ಹೋಗುತ್ತಿದ್ದಾಗ ತಾಲೂಕಿನ ಹಂದರಹಳ್ಳಿ ಗ್ರಾಮದ ಬಳಿ ಮಹೀಂದ್ರಾ ಜೈಲೊ ಕಾರು ಪಲ್ಟಿಯಾಗಿದೆ. ಬಾಗೇಪಲ್ಲಿ ತಾಲೂಕಿನ ನಕ್ಕಲಪಲ್ಲಿ ಗ್ರಾಮದವರಾದ ಮಲ್ಲಿಕಾರ್ಜುನರೆಡ್ಡಿ, ನಾಗರಾಜ , ಅಶೋಕ ರೆಡ್ಡಿ ಸುಂದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ ಗಿರೀಶ್, ರಮೇಶ್, ಮಂಜುನಾಥ್, ಅಶೋಕ್ ಎಂಬುವವರು ಗಂಭೀರವಾಗಿ ಗಾಯಗೊಂಡು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಡಿಗ್ರಿ ಮುಗಿಸಿ ಕೆಲವರು ಕೆಲಸಕ್ಕೆ ಹೋಗುತ್ತಿದ್ರೆ ಮತ್ತೆ ಕೆಲವರು ಐಎಎಸ್ ಪರೀಕ್ಷೆ ಬರಯಲು ಸಜ್ಜಾಗಿದ್ರು. ಇದಕ್ಕಾಗಿ ಆವಲಹಳ್ಳಿ ಬಳಿ ಒಂದು ಮನೆ ಮಾಡಿಕೊಂಡು ಅಲ್ಲೇ ವಾಸವಿದ್ದರು. ಆದರೆ ವಿಧಿಯಾಟ ನೋಡಿ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕನಸು ಕಟ್ಟಿಕೊಂಡಿದ್ದು ಯುವಕರ ಆಸೆ ಒಂದೇ ಕ್ಷಣಕ್ಕೆ ನುಚ್ಚು ನೂರಾಗಿದ್ದು ದುರಾದೃಷ್ಟಕರ.