ದೊಡ್ಡಬಳ್ಳಾಪುರ:ಪೆಟ್ರೋಲ್ ಬಂಕ್ನಿಂದ ರಸ್ತೆಗೆ ಬಂದ ಬೈಕ್ ಸವಾರ ಹೆದ್ದಾರಿಯಲ್ಲಿ ಯೂಟರ್ನ್ ತೆಗೆದುಕೊಳ್ಳುವಾಗ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಯೂಟರ್ನ್ ತೆಗೆದುಕೊಳ್ಳುವಾಗ ಬಂದೆರಗಿದ ಕಾರು... ಹಾರಿಹೋಯ್ತು ಬೈಕ್ ಸವಾರನ ಪ್ರಾಣಪಕ್ಷಿ!! - ಪೆಟ್ರೋಲ್ ಬಂಕ್ನಿಂದ ರಸ್ತೆಗೆ ಬಂದ ಬೈಕ್ ಸವಾರ
ಪೆಟ್ರೋಲ್ ಬಂಕ್ನಿಂದ ರಸ್ತೆಗೆ ಬಂದ ಬೈಕ್ ಸವಾರ ಹೆದ್ದಾರಿಯಲ್ಲಿ ಯೂಟರ್ನ್ ತೆಗೆದುಕೊಳ್ಳುವಾಗ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ದೇವರಾಜ್ (30) ಮೃತ
ನಗರದ ಹೊರ ವಲಯದ ಪಾಲಿನ ಜೋಗಹಳ್ಳಿ ಬಳಿಯ ಹಿಂದೂಪುರ-ಯಲಹಂಕ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ದೇವರಾಜ್ (30) ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿ ಚಿಕ್ಕಬಳ್ಳಾಪುರ ತಾಲೂಕಿನ ಎನ್. ಹೊಸೂರು ನಿವಾಸಿ. ಆದ್ರೆ ಆರೋಪಿ ಮಾತ್ರ ಘಟನೆಯ ನಂತರ ಕಾರನ್ನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.