ಬೆಂಗಳೂರು: ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಇಂದು ಕಂಠೀರವ ಸ್ಟುಡಿಯೋದಲ್ಲಿರುವ ವರನಟ ಡಾ. ರಾಜ್ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದರು.
ಅಭಿಷೇಕ್ ಅಂಬರೀಶ್ಗೆ ಸಾಥ್ ಕೊಟ್ಟ ನಿರ್ಮಾಪಕರ ರಾಕ್ಲೈನ್ ವೆಂಕಟೇಶ್ ರೆಬಲ್ ಸ್ಟಾರ್ ಅಂಬರೀಶ್ ಅವರ 9ನೇ ತಿಂಗಳ ಪುಣ್ಯ ಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದ ಅಭಿಷೇಕ್ ಅಂಬರೀಶ್, ಅಂಬಿ ಸಮಾಧಿಗೆ ಪೂಜೆ ಸಲ್ಲಿಸುವ ಮುಂಚೆ ದಿಢೀರನೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಜೊತೆಗೂಡಿ ಅಣ್ಣಾವ್ರ ಸಮಾಧಿ ಹಾಗೂ ಪಾರ್ವತಮ್ಮನವರ ಸಮಾಧಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು.
ಅಲ್ಲದೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಜೊತೆಗೂಡಿ ಸ್ಮಾರಕದ ಬಳಿ ಇರುವ ಉದ್ಯಾನವನವನ್ನು ಸಂಪೂರ್ಣವಾಗಿ ಒಂದು ರೌಂಡ್ ಹಾಕಿದರು. ರೆಬಲ್ ಸ್ಟಾರ್ ಅಂಬರೀಶ್ ಅವರು ವಿಧಿವಶರಾಗಿ ಬರುವ ನವೆಂಬರ್ ತಿಂಗಳಿಗೆ ಒಂದು ವರ್ಷವಾಗಲಿದೆ. ಒಂದು ವರ್ಷದ ಬಳಿಕ ಅಂಬಿ ಸ್ಮಾರಕದ ನಿರ್ಮಾಣ ಕಾರ್ಯಗಳು ಆರಂಭವಾಗಲಿದ್ದು, ಅಣ್ಣಾವ್ರ ಸ್ಮಾರಕದ ರೀತಿಯಲ್ಲೇ ಅಂಬಿ ಸ್ಮಾರಕ ನಿರ್ಮಾಣಕ್ಕೆ ಯೋಚಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಆ ಉದ್ದೇಶದಿಂದಲೇ ಇಂದು ಅಣ್ಣಾವ್ರ ಸ್ಮಾರದಕ ಬಳಿ ಇರುವ ಉದ್ಯಾನವನದಲ್ಲಿ ಒಂದು ರೌಂಡ್ ಹಾಕಿ ರಾಕ್ಲೈನ್ ವೆಂಕಟೇಶ್ ಜೊತೆ ಅಭಿಷೇಕ್, ಅಂಬಿ ಸ್ಮಾರಕದ ವಿಚಾರವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.