ದೇವನಹಳ್ಳಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್ನತ್ತ ಪ್ರಯಾಣಿಸಿದರು.
ಆರ್‌ಸಿಬಿ ಅಭಿಮಾನಿಗಳೇ, ಬೆಂಗಳೂರಿಗೆ ಆಗಮಿಸಿದ್ದಾರೆ ಎಬಿ ಡಿ ವಿಲಿಯರ್ಸ್! ಈ ಸಲ..?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸಲು ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಕ್ರಿಕೆಟರ್ ಎಬಿ ಡಿ ವಿಲಿಯರ್ಸ್ ಗುರುವಾರ ಬೆಂಗಳೂರಿಗೆ ಆಗಮಿಸಿದರು.
ಎಬಿ ಡಿ ವಿಲಿಯರ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಟ್ವಿಟರ್ ಖಾತೆಯಲ್ಲಿ ಎಬಿ ಡಿ ಬೆಂಗಳೂರಿಗೆ ಬಂದಿರುವ ವಿಷಯವನ್ನು ಹಂಚಿಕೊಂಡಿದೆ. ಐಪಿಎಲ್‌ನ 16ನೇ ಸೀಸನ್ಗೆ ತಂಡದ ಆಯ್ಕೆ ಬಗ್ಗೆ ಚರ್ಚಿಸಲು ಮತ್ತು ಆಟಗಾರರೊಂದಿಗೆ ಮಾತನಾಡಲು ಬಂದಿರುವುದಾಗಿ ಅವರು ಹೇಳಿದ್ದಾರೆ. ಕಳೆದ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಎಬಿ ಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿರುವುದು ಅಭಿಮಾನಿಗಳಿಗೆ ಸಂತಸ ಉಂಟುಮಾಡಿದೆ.
ಇದನ್ನೂ ಓದಿ:ಹರಿಣಗಳ ವಿರುದ್ಧ ಪಾಕ್ಗೆ 33 ರನ್ ಜಯ.. ಸೆಮಿಫೈನಲ್ ಆಸೆ ಇನ್ನೂ ಜೀವಂತ
Last Updated : Nov 4, 2022, 8:34 AM IST