ಕರ್ನಾಟಕ

karnataka

ETV Bharat / state

ಕುಡಿದ ಮತ್ತಿನಲ್ಲಿ ಕೆರೆಗೆ ಹಾರಿ ಪ್ರಾಣ ಬಿಟ್ಟ ಯುವಕ - ETV Bharat kannada News

ಕೆರೆಯ ಬಳಿ ಮದ್ಯಪಾನ ಮಾಡಿದ ಯುವಕ ಬಳಿಕ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.

Youth drowned in water
ನೀರಿನಲ್ಲಿ ಮುಳುಗಿ ಯುವಕ ಸಾವು

By

Published : Mar 19, 2023, 11:09 PM IST

ದೊಡ್ಡಬಳ್ಳಾಪುರ :ಯುಗಾದಿ ಹಬ್ಬಕ್ಕೆಂದು ಅಕ್ಕನ ಮನೆಗೆ ಬಂದಿದ್ದ ಯುವಕ ಕುಡಿದ ನಶೆಯಲ್ಲಿ ಕೆರೆಗೆ ಹಾರಿ ಪ್ರಾಣ ಬಿಟ್ಟ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಕೆರೆಯಲ್ಲಿ ಇಂದು ಸಂಜೆ ಘಟನೆ ನಡೆದಿದೆ. ಮೃತ ಯುವಕ ಕೆರೆಯ ಬಳಿ ಮದ್ಯಪಾನ ಮಾಡಿದ್ದು, ನಂತರ ಕುಡಿದ ಮತ್ತಿನಲ್ಲಿದ್ದ ಯುವಕ ಕೆರೆಗೆ ಹಾರಿದ್ದಾನೆ. ಕೆರೆಗೆ ಬಿದ್ದನ್ನು ಕಂಡ ತತ್​ಕ್ಷಣವೇ ಆತನ ಪ್ರಾಣ ರಕ್ಷಣೆಗಾಗಿ ಸ್ನೇಹಿತರು ಹಗ್ಗ ಎಸೆದಿದದ್ದಾರೆ. ಆದರೇ ಹಗ್ಗ ಹಿಡಿದು ಕೊಳ್ಳಲು ಸಾದ್ಯವಾಗದೆ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಈ ಘಟನೆಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಮೃತನು ಬೆಂಗಳೂರಿನ ಬ್ಯಾಟರಾಯನಪುರದ ಮುನಿರಾಜು (26) ಎಂಬುದು ತಿಳಿದುಬಂದಿದೆ. ಮೃತ ಮುನಿರಾಜು ಯುಗಾದಿ ಹಬ್ಬಕ್ಕೆಂದು ತನ್ನ ಅಕ್ಕನ ಮನಗೆ ಬಂದಿದ್ದ, ಪಾನಮತ್ತನಾಗಿದ್ದ ಆತ ಕೆರೆಯ ದಂಡೆಯ ಮೇಲೆ ತನ್ನ ಮೊಬೈಲ್ ಇಟ್ಟು ಕೆರೆಗ ಹಾರಿದ್ದಾನೆ. ಸ್ಥಳದಲ್ಲಿದ್ದ ಆತನ ಸ್ನೇಹಿತರು ಆತನ ಪ್ರಾಣ ಉಳಿಸಲು ಹಗ್ಗ ಎಸೆದಿದ್ದಾರೆ. ಪದೇ ಪದೇ ಹಗ್ಗ ಎಸೆದರು ಆತ ಹಗ್ಗವನ್ನ ಹಿಡಿದು ಕೊಳ್ಳಲು ಸಾದ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಸಿ ಕೆರೆಯಲ್ಲಿ ಮುಳುಗಿದ ಶವವನ್ನ ಹೊರ ತೆಗೆದಿದ್ದಾರೆ. ಹಾಗು ಈ ಸಂಬಂಧ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಮೃತ ಯುವಕನ ಸಂಬಂಧಿಕರ ಅಕ್ರಂಧನ ಮುಗಿಲು ಮುಟ್ಟಿತು.

ಬೆಳಗಾವಿ- ಆಟವಾಡಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವು :ಮನೆಯಲ್ಲಿ ಕುಟುಂಬಸ್ಥರಿಗೆ ಕ್ರಿಕೆಟ್ ಆಟವಾಡುತ್ತೇನೆ ಎಂದು ಹೇಳಿ ಹೋದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದ ಯಮನಪ್ಪ ಪ್ರಕಾಶ ರೆಡ್ಡರಟ್ಟಿ (10) ಯೇಸು ಬಸಪ್ಪ (14) ಮೃತ ಬಾಲಕರು ಎಂದು ಗುರುತಿಸಲಾಗಿದೆ.

ಕ್ರಿಕೆಟ್ ಆಟವನ್ನು ಆಡುತ್ತೇವೆ ಎಂದು ಮನೆಯಿಂದ ಹೊರಗೆ ಹೋಗಿದ್ದ ಮಕ್ಕಳು ಯಾದಗೂಡ ಹೊರವಲಯ ಕೃಷಿ ಹೊಂಡದಲ್ಲಿ ಈಜಲು ಮುಂದಾಗಿದ್ದಾರೆ. ಈ ವೇಳೆ ಈಜಲು ಮೊದಲು ಮುಂದಾದ ಯಮನಪ್ಪ ನೀರಿನಲ್ಲಿ ಮುಳಗಳು ಶುರು ಮಾಡಿದ್ದಾನೆ. ಇದನ್ನು ನೋಡಿದ ಯೇಸು ಬಸಪ್ಪ, ಯಮನಪ್ಪನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ಆದರೇ ಯಾವುದೇ ಪ್ರಯೋಜನವಾಗದೆ ಇಬ್ಬರು ಮಕ್ಕಳು ನೀರಿನಲ್ಲಿ ಬಿದ್ದು ಸಾವು ಸಂಭವಿಸಿದ್ದಾರೆ. ಎಂದು ಪೊಲೀಸ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಲಾರಿ-ಓಮ್ನಿ ಮುಖಾಮುಖಿ ಡಿಕ್ಕಿ: ಮಗು ಸೇರಿ 6 ಮಂದಿ ದುರ್ಮರಣ

ABOUT THE AUTHOR

...view details