ಬೆಂಗಳೂರು:ಗೃಹಿಣಿಯೊರ್ವಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಂದಗುಡಿ ಬಳಿಯ ಚೊಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.
ಗೃಹಿಣಿ ಅನುಮಾನಾಸ್ಪದ ಸಾವು: ಗಂಡನೇ ಕೊಲೆ ಮಾಡಿದ ಆರೋಪ - undefined
ಗೃಹಿಣಿಯೊರ್ವಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಪತಿಯೇ ಕಿರುಕುಳ ನೀಡಿ ಇದೀಗ ಕೊಲೆ ಮಾಡಿದ್ದಾನೆಂದು ಪೋಷಕರು ಆರೋಪಿಸಿದ್ದಾರೆ.
ಗೃಹಿಣಿ ಅನುಮಾನಾಸ್ಪದ ಸಾವು
ಮೋನಿಕಾ(24) ಮೃತ ಮಹಿಳೆ. ನಾಲ್ಕು ವರ್ಷದ ಹಿಂದೆ ಮಂಜುನಾಥ್ ಎಂಬಾತನೊಂದಿಗೆ ವಿವಾಹವಾಗಿದ್ದ ಮೋನಿಕಾಗೆ ಕಳೆದ ಒಂದು ವರ್ಷದಿಂದ ಪತಿ ಕಿರುಕುಳ ನೀಡುತ್ತಿದ್ದನಂತೆ. ಇದೀಗ ಆತನೇ ಕೊಲೆ ಮಾಡಿದ್ದಾನೆಂದು ಮೋನಿಕಾ ತಂದೆ ಸೋಮಣ್ಣ ಆರೋಪಿಸಿದ್ದಾರೆ.
ಈ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದ್ದು, ತಾಯಿಯನ್ನು ಕಳೆದುಕೊಂಡ ಕೂಸುಗಳು ತಬ್ಬಲಿಗಳಾಗಿವೆ.ಘಟನೆ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.