ಆನೇಕಲ್: ಕೈ ಕಾಲು ರುಂಡ ಕತ್ತರಿಸಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟದ ಜನತಾ ಕಾಲೊನಿಯಲ್ಲಿ ನಡೆದಿದೆ. ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ವಾಸಿ ಜನತಾ ಕಾಲೊನಿಯ ಗೀತಮ್ಮ(53) ಮೃತ ಮಹಿಳೆಯಾಗಿದ್ದಾಳೆ. ಮನೆ ಸಮೀಪವೇ ಕೈ ಕಾಲು ರುಂಡ ಕತ್ತರಿಸಿ ದೇಹ ಎಸೆದಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಮಹಿಳೆಯ ಹತ್ಯೆ ಮಾಡಿದ್ದು, ನಗ್ನ ಸ್ಥಿತಿಯಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಧಾವಿಸಿದ್ದಾರೆ. ಗೀತಮ್ಮಳ ಮನೆಯಲ್ಲಿ ಬಾಡಿಗೆಗೆ ವಾಸವಿದ್ದವರಿಂದ ಕೊಲೆ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಉತ್ತರ ಭಾರತ ಮೂಲದ ಮೂರ್ನಾಲ್ಕು ಮಂದಿ ಬಾಡಿಗೆಗೆ ವಾಸವಿದ್ದರು. ಮೂರ್ನಾಲ್ಕು ದಿನಗಳಿಂದ ಬಾಡಿಗೆಗೆ ಇದ್ದ ಯುವಕರು ನಾಪತ್ತೆಯಾಗಿದ್ದು, ಇವರೊಂದಿಗೆ ಗೀತಮ್ಮಳು ಕಾಣೆಯಾಗಿದ್ದಳು. ಇಂದು ಶವವಾಗಿ ಮನೆ ಸಮೀಪವೇ ಪತ್ತೆಯಾಗಿರುವುದು ಇಡೀ ಬನ್ನೇರುಘಟ್ಟ ಭೀತಿಯಲ್ಲಿ ಮುಳುಗುವಂತೆ ಮಾಡಿದೆ.
ಇದು ಬೆಂಗಳೂರಿನಲ್ಲಿ ನಡೆದ ಕೊಲೆಯ ಕಥೆಯಾದರೆ, ತೆಲಂಗಾಣ ರಾಜ್ಯದಲ್ಲಿ ಪತ್ನಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದಳೆಂದು ಕೋಪಗೊಂಡ ಪತಿಯೊಬ್ಬ ಆಕೆಯ ಕತ್ತು ಹಿಸುಕಿ ಕೊಂದು ಹಾಕಿರುವ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಭೀಕರ ಹತ್ಯೆ ವಿಚಾರ ಈಗಷ್ಟೇ ಬೆಳಕಿಗೆ ಬಂದಿದೆ. ಮೃತದೇಹದ ಮರಣೋತ್ತರ ವರದಿ ಬಂದ ನಂತರದ ಬೆಳವಣಿಯಲ್ಲಿ ಈ ಪ್ರಕರಣದ ಒಂದೊಂದೆ ಅಘಾತಕಾರಿ ಸುದ್ದಿಗಳು ಬಯಲಾಗುತ್ತಿವೆ. ಅಂದ ಹಾಗೆ ಈ ಕೊಲೆ ನಡೆದಿದ್ದು, ಕಳೆದ ತಿಂಗಳು ಮೇ 20 ರಂದು ಅಂದರೆ ಈಗ್ಗೆ 10-11 ದಿನಗಳ ಹಿಂದೆ. ಈ ಪ್ರಕರಣ ಕಂಡು ಹಿಡಿಯಲು ಪೊಲೀಸರು ಬರೋಬ್ಬರಿ 10 ದಿನಗಳನ್ನ ತೆಗೆದುಕೊಂಡಿದ್ದಾರೆ.