ಕರ್ನಾಟಕ

karnataka

ETV Bharat / state

ಪಂಚರತ್ನ ಯಾತ್ರೆಯಲ್ಲಿ ಜನರ ಸುನಾಮಿ ಅಲೆ ಎದ್ದಿದೆ; ವಿರೋಧಿಗಳಿಗಿದು ನುಂಗಲಾರದ ತುತ್ತು: ಹೆಚ್‌ಡಿಕೆ - ಬಿಎಂಎಸ್‌ ಟ್ರಸ್ಟ್

ಮಂಡ್ಯದಲ್ಲಿ ಆತ್ಮಹತ್ಯೆ ಹೆಚ್ಚಾಗಿದ್ದು ಕಾಂಗ್ರೆಸ್​ ಸರ್ಕಾರದ ಆಡಳಿತದಲ್ಲಿ. ನಾನು ಜಿಲ್ಲೆಯ ಅಭಿವೃದ್ಧಿಗೆ 9 ಸಾವಿರ ಕೋಟಿ ರೂ ಕೊಟ್ಟಿದ್ದೆ. ಆದರೆ ಆ ಹಣವನ್ನು ಬಿಜೆಪಿ ಬೇರೆ ಕಡೆ ವರ್ಗಾವಣೆ ಮಾಡಿತ್ತು. ಆಗ ಇಲ್ಲದ ಅಭಿಮಾನ ಈಗ ಮಂಡ್ಯದ ಮೇಲೆ ಅಶ್ವಥ್ ನಾರಾಯಣ್​ಗೆ ಯಾಕೆ ಎಂದು ಹೆಚ್‌ಡಿಕೆ ಟಾಂಗ್​ ನೀಡಿದ್ದಾರೆ.

A tsunami wave of people has arisen in Pancharatna Yatra; It's a tough bite for opponents: HDK
ಪಂಚರತ್ನ ಯಾತ್ರೆಯಲ್ಲಿ ಜನರ ಸುನಾಮಿ ಅಲೆ ಎದ್ದಿದೆ; ಇದು ವಿರೋಧಿಗಳಿಗೆ ನುಂಗಲಾರದ ತುತ್ತು: ಹೆಚ್ ಡಿ ಕೆ

By

Published : Nov 28, 2022, 5:57 PM IST

Updated : Nov 28, 2022, 6:55 PM IST

ದೇವನಹಳ್ಳಿ:ರಕ್ತ ಹೀರುವವರನ್ನು ನಿಮ್ಮ ನಾಯಕರಾಗಿ ಮಾಡುತ್ತೀರಾ ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು‌ ನೀಡಿದ್ದಾರೆ. ದೇವನಹಳ್ಳಿಯಲ್ಲಿ ಪಂಚರತ್ನ ರಥಯಾತ್ರೆ ಕೈಗೊಂಡ ಹೆಚ್​ ಡಿ ಕೆ, ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಮಂಡ್ಯದಲ್ಲಿ ಆತ್ಮಹತ್ಯೆ ಹೆಚ್ಚಾಗಿದ್ದು ಕಾಂಗ್ರೆಸ್​ ಸರ್ಕಾರದ ಆಡಳಿತದಲ್ಲಿ. ನಾನು ಜಿಲ್ಲೆಯ ಅಭಿವೃದ್ಧಿಗೆ 9 ಸಾವಿರ ಕೋಟಿ ರೂ ಕೊಟ್ಟಿದ್ದೆ. ಆದರೆ ಆ ಹಣವನ್ನು ಬಿಜೆಪಿ ಬೇರೆ ಕಡೆ ವರ್ಗಾವಣೆ ಮಾಡಿತ್ತು. ಆಗ ಇಲ್ಲದ ಅಭಿಮಾನ ಈಗ ಮಂಡ್ಯದ ಮೇಲೆ ಅಶ್ವಥ್ ನಾರಾಯಣ್​ಗೆ ಯಾಕೆ ಎಂದು ಟಾಂಗ್​ ನೀಡಿದ್ದಾರೆ. ಜೊತೆಗೆ ದೇಶದಲ್ಲಿ ನರ ಬಲಿ ಪಡೆದದ್ದು, ಅಧಿಕಾರಕ್ಕಾಗಿ ರಕ್ತದೋಕುಳಿ ಹರಿಸಿದ್ದು ಯಾರು ಎಂದು ಪ್ರಶ್ನಿಸಿ, ಹುಬ್ಬಳ್ಳಿ ಈದ್ಗಾ ಮೈದಾನ ವಿಚಾರದಲ್ಲಿ ಜೀವಗಳನ್ನು ಬಲಿ ಪಡೆದದ್ದು ಬಿಜೆಪಿ ಅಲ್ಲವೇ ಎಂದು ಸರ್ಕಾರದ ಕಾಲೆಳೆದಿದ್ದಾರೆ.

ಪಂಚರತ್ನ ಯಾತ್ರೆಯಲ್ಲಿ ಜನರ ಸುನಾಮಿ ಅಲೆ ಎದ್ದಿದೆ; ವಿರೋಧಿಗಳಿಗಿದು ನುಂಗಲಾರದ ತುತ್ತು: ಹೆಚ್‌ಡಿಕೆ

ಮುಂದುವರೆದು, ಮೈಶುಗರ್ ಅಭಿವೃದ್ದಿಗೆ ನಾನು ನೂರು ಕೋಟಿ ರೂ ಹಣವನ್ನು ಬಜೆಟ್‌ನಲ್ಲಿ ಕೊಟ್ಟಿದ್ದೇನೆ. ಇದೇ ಕಾರ್ಖಾನೆಗೆ ಯಡಿಯೂರಪ್ಪ ಕಾಲದಲ್ಲಿ ನಾಗರಾಜಪ್ಪ ಎಂಬುವವರನ್ನು ನೇಮಕ ಮಾಡಿದ್ದರು, ಆ ಹಣ ಯಾರ ಮನೆ ಸೇರಿದೆ? ಯಾಕೆ ಹಾಳು ಮಾಡಿದಿರಿ ಎಂದು ಪ್ರಶ್ನೆ ಮಾಡಿದರು. ಹಾಗೆ ತಮ್ಮ ಪಂಚರತ್ನ ರಥ ಯಾತ್ರೆ ಕುರಿತು ಮಾತನಾಡಿದ ಹೆಚ್​ ಡಿ ಕೆ, ನನ್ನ ಪಂಚರತ್ನ ಯಾತ್ರೆಯಲ್ಲಿ ಜನರ ಸುನಾಮಿ ಅಲೆ ಎದ್ದಿದೆ. ಇದು ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ ನನ್ನ ಬಗ್ಗೆ ಮಾತನಾಡುವ ನೈತಿಕತೆಯನ್ನು ಯಾರೂ ಉಳಿಸಿಕೊಂಡಿಲ್ಲ. ಇನ್ನು ಮುಂದೆ ನಾನೇ ಎಲ್ಲರ ಟಾರ್ಗೆಟ್ ಅಂತ ಗೊತ್ತಿದೆ ಎಂದರು.

ಇದನ್ನೂ ಓದಿ:'ಸೈಲೆಂಟ್ ಸುನೀಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಫೈಟರ್ ರವಿ ಬಿಜೆಪಿ ಸೇರಿದ್ದು ತಪ್ಪಲ್ಲ'

Last Updated : Nov 28, 2022, 6:55 PM IST

ABOUT THE AUTHOR

...view details