ನೆಲಮಂಗಲ : ಸರಗಳ್ಳತನ, ಮನೆಗಳ್ಳತನ ಮಾಡುತ್ತಿದ್ದ ಕಳ್ಳನನ್ನು ಸೆರೆ ಹಿಡಿದ ದಾಬಸ್ ಪೇಟೆ ಪೊಲೀಸರು ಆರೋಪಿಯಿಂದ ₹4.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಕಳ್ಳನನ್ನ ಸೆರೆ ಹಿಡಿದ ದಾಬಸ್ ಪೇಟೆ ಪೊಲೀಸರು - ಬೆಂಗಳೂರಿನಲ್ಲಿ ಕಳ್ಳತನ ಸುದ್ದಿ
ಬಂಧಿತ ಆರೋಪಿಯಿಂದ 4.5 ಲಕ್ಷ ಮೌಲ್ಯದ 77 ಚಿನ್ನಾಭರಣ, 1/4 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನ ವಶಕ್ಕೆ ಪಡೆಯಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಮನೆಗಳ್ಳತ, 1 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ವಿಚಾರಣೆ ಮೂಲಕ ತಿಳಿದಿದೆ..
ನೆಲಮಂಗಲ ತಾಲೂಕಿನ ಅಗಲಕುಪ್ಪೆ ಬಳಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಕಳ್ಳನನ್ನ ದಾಬಸ್ ಪೇಟೆ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತ ಆರೋಪಿ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೊಮ್ಮಲದೇವಿಪುರದ ನರೇಂದ್ರ ಬಾಬು ಅಲಿಯಾಸ್ ನರಿ (29) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯಿಂದ 4.5 ಲಕ್ಷ ಮೌಲ್ಯದ 77 ಚಿನ್ನಾಭರಣ, 1/4 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನ ವಶಕ್ಕೆ ಪಡೆಯಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಮನೆಗಳ್ಳತ, 1 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ವಿಚಾರಣೆ ಮೂಲಕ ತಿಳಿದಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.