ನೆಲಮಂಗಲ : ಅಳಿಯನ ಆಸ್ತಿ ಮೇಲೆ ಕಣ್ಣು ಹಾಕಿದ್ದ ಅತ್ತೆ, ಅಳಿಯನನ್ನ ಮನೆಯಲ್ಲಿ ಕೂಡಿ ಹಾಕಿ ಕಿರುಕುಳ ಕೊಡುತ್ತಿದ್ದಳಂತೆ. ಅತ್ತೆ ಕಿರುಕುಳಕ್ಕೆ ಮನನೊಂದು ಅಳಿಯ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ತಾಲೂಕಿನ ತೋಟನಹಳ್ಳಿಯಲ್ಲಿ ನಡೆದಿದೆ. ಆನಂದ್ (38) ಎಂಬಾತ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಅಳಿಯನ ಆಸ್ತಿ ಮೇಲೆ ಅತ್ತೆ ಕಣ್ಣು.. ಆಕೆಯ ಕಿರುಕುಳಕ್ಕೆ ಬೇಸತ್ತು ಕೊನೆಗೆ ಆತ್ಮಹತ್ಯೆಗೆ ಶರಣಾದ.. - ನೆಲಮಂಗಲ ಅತ್ತೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಳಿಯ
ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ಆನಂದ್, ತನ್ನ ಆಸ್ತಿಯನ್ನ ತನ್ನ ತಮ್ಮನ ಮಕ್ಕಳಿಗೆ ನೀಡುವಂತೆ ಬರೆದಿದ್ದಾನೆ. ಹಾಗೆಯೇ ಅತ್ತೆ, ಬಾಮೈದ ಮತ್ತು ಹೆಂಡತಿ ನೀಡುತ್ತಿದ್ದ ಕಿರುಕುಳವನ್ನ ಡೆತ್ ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾನೆ. ಈ ಕುರಿತು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಆನಂದ್ನ ಪಿತ್ರಾರ್ಜಿತ ಆಸ್ತಿಯನ್ನ ಹೊಡೆಯುವ ಸಂಚು ನಡೆಸಿದ ಅತ್ತೆ ಗಂಗಮ್ಮ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಳಂತೆ. ಇವಳಿಗೆ ಆನಂದ್ ಹೆಂಡತಿ ನೀಲಮ್ಮ ಹಾಗೂ ಬಾಮೈದ ಗಂಗರಾಜು ಸಾಥ್ ನೀಡಿದ್ದರಂತೆ. ಅತ್ತೆ, ಹೆಂಡತಿ ಮತ್ತು ಬಾಮೈದ ನೀಡುತ್ತಿದ್ದ ಕಿರುಕುಳವನ್ನ ವಿಡಿಯೋ ಮಾಡಿ ಆನಂದ್ ತನ್ನ ನೋವು ತೋಡಿಕೊಂಡಿದ್ದಾನೆ.
ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ಆನಂದ್, ತನ್ನ ಆಸ್ತಿಯನ್ನ ತನ್ನ ತಮ್ಮನ ಮಕ್ಕಳಿಗೆ ನೀಡುವಂತೆ ಬರೆದಿದ್ದಾನೆ. ಹಾಗೆಯೇ ಅತ್ತೆ, ಬಾಮೈದ ಮತ್ತು ಹೆಂಡತಿ ನೀಡುತ್ತಿದ್ದ ಕಿರುಕುಳವನ್ನ ಡೆತ್ ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾನೆ. ಈ ಕುರಿತು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.