ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಹತ್ತು ದಿನಗಳ ಹಿಂದೆ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಈ ವ್ಯಕ್ತಿಯನ್ನು ಕೊಲೆ ಮಾಡಿ ಹೂತು ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ನಂದೀಶ್ ಕೊಲೆಯಾದ ವ್ಯಕ್ತಿ. ಪ್ರಕಾಶ್ ಬಂಧಿತ ಆರೋಪಿ.
ದೊಡ್ಡನಲ್ಲೂರಹಳ್ಳಿ ಗ್ರಾಮದ ನಂದೀಶ್ ಲೇಬರ್ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿ ಸುತ್ತಾಡುತ್ತಿದ್ದನಂತೆ. ಈ ವೇಳೆ ಪಕ್ಕದ ಗ್ರಾಮದ ಬೈರನಹಳ್ಳಿಯ ಪ್ರಕಾಶ್ ಎನ್ನುವವನ ಪತ್ನಿಯ ಪರಿಚಯವಾಗಿದೆ. ನಂದೀಶ್ ಆಕೆಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದೇ ತಿಂಗಳ 13ನೇ ತಾರೀಖಿನಂದು ಶುಕ್ರವಾರ ನಂದೀಶ್, ಆರೋಪಿ ಪ್ರಕಾಶ್ ಮನೆಗೆ ಹೋಗಿದ್ದು ನಂತರ ವಾಪಸ್ ಬರುತ್ತಿದ್ದನಂತೆ. ಈ ವೇಳೆ ಗ್ರಾಮದ ರಸ್ತೆಯಲ್ಲಿ ನಂದೀಶ್ನನ್ನು ಅಡ್ಡಗಟ್ಟಿದ ಪ್ರಕಾಶ್, ಮಾತನಾಡಬೇಕು ಅಂತ ಹೊಲದ ಬಳಿ ಕರೆತಂದು ಗಲಾಟೆ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನೋಡುನೋಡ್ತಿದ್ದಂತೆ ಪ್ರಕಾಶ್ ನಂದೀಶನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಶವವನ್ನು ಹೊಲದಲ್ಲಿ ತೆಗೆಸಿದ್ದ ಗುಂಡಿಗೆ ಹಾಕಿ ಮಣ್ಣು ಮಚ್ಚಿ, ಅಲ್ಲಿಂದ ತೆರಳಿದ್ದಾನೆ. ನಂದೀಶನ ಮೊಬೈಲ್ ಅನ್ನು ಯಾರಿಗೂ ಅನುಮಾನ ಬಾರದಂತೆ ಹೆದ್ದಾರಿಯಲ್ಲಿನ ಮಂಗಳಮುಖಿಯರ ಮನೆ ಬಳಿ ಬಿಸಾಕಿ ಪರಾರಿ ಆಗಿದ್ದ ಎಂದು ನಂದಗುಡಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಬಳಿ ಭೀಕರ ಹತ್ಯೆ: ಆಸ್ತಿಗಾಗಿ ಮಾವನಿಗೆ 20ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಅಳಿಯ