ದೇವನಹಳ್ಳಿ: ಕೆರೆಕೋಡಿ ಒತ್ತುವರಿ ತೆರವು ಮಾಡಿ ಗ್ರಾಮದ ಸ್ಮಶಾನಕ್ಕೆ ಜಾಗ ಮಂಜೂರಾತಿ ಮಾಡುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಮುಂದೆ ಮಾಜಿ ಗ್ರಾಪಂ ಸದಸ್ಯ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ 15,000 ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಬೀಳುತ್ತಿರುವ ಮಳೆಯಿಂದ ಬೂದಿಗೆರೆ ಕೆರೆ ತುಂಬಿ ಕೋಡಿ ಬಿದ್ದಿದೆ. ಪರಿಣಾಮ ಕೆರೆ ಕೋಡಿಗೆ ಸ್ಮಶಾನ ತುಂಬಿ ಶವಸಂಸ್ಕಾರಕ್ಕೆ ಜಾಗ ಇಲ್ಲದಂತಾಗಿ ಇದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನು ಅಂದರಹಳ್ಳಿ ಕೆರೆ ಕೋಡಿಗೆ ಸೇರಿದ ಕೋಟ್ಯಂತರ ಬೆಲೆಯ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವು ಮತ್ತು ಸ್ಮಶಾನ ಜಾಗ ಮಂಜೂರಾತಿಗೆ ಆಗ್ರಹಿಸಿ ಬೂದಿಗೆರೆಯ ಮೂರ್ತಿ ಎಂಬುವವರು ಪಂಚಾಯ್ತಿ ಕಚೇರಿ ಬಳಿ ಧರಣಿ ಕೂತಿದ್ದಾರೆ. ಈ ಕುರಿತು ಮಾತನಾಡಿದ ಮೂರ್ತಿ, ಗ್ರಾಮದಲ್ಲಿ ಸುಮಾರು 15,000 ಜನಸಂಖ್ಯೆ ಇದ್ದು ಸ್ಮಶಾನಕ್ಕೆ ಜಾಗವಿಲ್ಲದೇ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
4 ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆಸಿತ್ತಿರುವೆ. ಗ್ರಾಮಕ್ಕೆ ಸ್ಮಶಾನ ಮಂಜೂರು ಆಗುವವರೆಗೂ ಧರಣಿ ಕೈ ಬಿಡಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಶೌಚಾಲಯ ನಿರ್ಮಿಸಿಕೊಡಲಿಲ್ಲ ಎಂಬ ಕಾರಣಕ್ಕೆ ಅರೆಬೆತ್ತಲೆಯಾಗಿ ಪ್ರತಿಭಟಿಸಿದ ವ್ಯಕ್ತಿ