ದೊಡ್ಡಬಳ್ಳಾಪುರ (ಬೆಂ.ಗ್ರಾಮಾಂತರ) :ಮನೆಯ ಮುಂದೆ ನಿಲ್ಲಿಸಿದ ಕಾರು, ಕಾಂಪೌಂಡ್‌ನೊಳಗಿದ್ದ 8 ಬೈಕ್ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಿಡಿಗೇಡಿಗಳ ಕೃತ್ಯ ಕುರಿತು ಮಾಲೀಕರ ಅಳಲು.. ನಗರದ ಶ್ರೀನಗರದ ರೈಲ್ವೆ ಸ್ಟೇಷನ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ಗುತ್ತಿಗೆದಾರರಾದ ಶಿವಕುಮಾರ್ ಮನೆಯ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರು ಮತ್ತು 8 ಬೈಕ್ಗಳು ಬೆಂಕಿಗೆ ಆಹುತಿಯಾಗಿವೆ. ಜನವರಿ 12ರ ಮುಂಜಾನೆ 3 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ.
ಅಂದು ಆಗಿದ್ದಿಷ್ಟೇ.. :ಜ.11ರ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯ ಹತ್ತಿರದಲ್ಲಿಯೇ ಇದ್ದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಹೋಗಿದ್ದ ಶಿವಕುಮಾರ್, ಸುಮಾರು 11 ಗಂಟೆಯ ಸಮಯದಲ್ಲಿ ಮನೆಗೆ ಹಿಂತಿರುಗಿದ್ದಾರೆ.
ಮುಂಜಾನೆ 3 ಗಂಟೆ ಸಮಯದಲ್ಲಿ ಪಕ್ಕದ ಮನೆಯವರ ಕೂಗಾಟ ಕೇಳಿ ಹೊರ ಬಂದಾಗ ಮನೆಯ ತುಂಬ ಹೊಗೆ ಅವರಿಸಿ, ಕಾಂಪೌಂಡ್ನಲ್ಲಿ ನಿಲ್ಲಿಸಿದ್ದ ಬೈಕ್ಗಳು ಹೊತ್ತಿ ಉರಿದಿವೆ. ಅಕ್ಕಪಕ್ಕದ ಮನೆಯವರು ನೀರು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಿಂದ ಶಿವಕುಮಾರ್ ಮತ್ತು ಇದೇ ಕಟ್ಟಡದಲ್ಲಿ ಬಾಡಿಗೆ ಇದ್ದ ಮೂರು ಕುಟುಂಬ ಪ್ರಾಣಪಾಯದಿಂದ ಪಾರಾಗಿವೆ. ಆಕಸ್ಮಿಕವಾಗಿ ನಡೆದ ಘಟನೆಯಿಂದ ಶಿವಕುಮಾರ್ ಕುಟುಂಬ ಆತಂಕಕ್ಕೊಳಗಾಗಿದೆ.
ಇದನ್ನೂ ಓದಿ:ಪೆಟ್ರೋಲ್ ಪಂಪ್ನಲ್ಲಿ ಹಣ ದೋಚಿ ಪರಾರಿಯಾಗಿದ್ದ ಖದೀಮರ ಬಂಧನ
ಇನ್ನು, ಮನೆಯ ಮುಂದೆ ಹಾಕಿದ ಸಿಸಿ ಕ್ಯಾಮೆರಾದಲ್ಲಿ ಕಿಡಿಗೇಡಿಯ ದುಷ್ಕೃತ್ಯ ಬಯಲಾಗಿದೆ. ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ಬಂದ ಕಿಡಿಗೇಡಿ ಮೊದಲಿಗೆ ಶಿವಕುಮಾರ್ ಮನೆ ಮುಂದೆ ನಿಲ್ಲಿಸಿದ್ದ ಓಮ್ನಿಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಬೈಕ್ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಶಿವಕುಮಾರ್ ಹೊರ ಬರುತ್ತಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಯಾರೊಂದಿಗೂ ವೈಯಕ್ತಿಕ ದ್ವೇಷವಿರದ ಶಿವಕುಮಾರ್ ವಾಹನಗಳನ್ನು ಟಾರ್ಗೆಟ್ ಮಾಡಿರುವುದು ಶಿವಕುಮಾರ್ ಕುಟುಂಬಕ್ಕೆ ಆತಂಕಕ್ಕೆಡೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದು ವಾರ ಕಳೆದ್ರೂ ಆರೋಪಿ ಪತ್ತೆಯಾಗದಿರುವುದು, ಇತರ ವಾಹನ ಮಾಲೀಕರ ಆತಂಕಕ್ಕೂ ಕಾರಣವಾಗಿದೆ.