ನೆಲಮಂಗಲ: ಕಲ್ಲಿನ ಕ್ವಾರಿಯಲ್ಲಿ ಸ್ನಾನ ಮಾಡಲು ಹೋದ ಕಂಪನಿ ಕಾರ್ಮಿಕ ಆಯತಪ್ಪಿ ಬಿದ್ದು ಸಾವಿಗೀಡಾದ ಘಟನೆ ನೆಲಮಂಗಲ ತಾಲೂಕಿನ ಹ್ಯಾಡಾಳು ಗ್ರಾಮದ ಬಳಿ ನಡೆದಿದೆ.
ಕಲ್ಲು ಕ್ವಾರಿಯಲ್ಲಿ ಸ್ನಾನ ಮಾಡುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು - nelamangala latest news
ಸ್ನಾನ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ನೆಲಮಂಗಲದಲ್ಲಿ ನಡೆದಿದೆ.
![ಕಲ್ಲು ಕ್ವಾರಿಯಲ್ಲಿ ಸ್ನಾನ ಮಾಡುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು A man dies while bathing in Quarry](https://etvbharatimages.akamaized.net/etvbharat/prod-images/768-512-8781731-thumbnail-3x2-nin.jpg)
ಕಲ್ಲು ಕ್ವಾರಿಯಲ್ಲಿ ಸ್ನಾನ ಮಾಡುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವು
ಒರಿಸ್ಸಾ ಮೂಲದ ಸಮೀರ್ (24) ಮೃತ ವ್ಯಕ್ತಿ. ಈತ ಹ್ಯಾಡಾಳು ಗ್ರಾಮದ ಅಕ್ರಾನ್ ಕಂಪನಿಯಲ್ಲಿ ಕಾಂಕ್ರಿಟ್ ಪ್ಲಾಂಟ್ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ. ಕಲ್ಲು ಕ್ವಾರಿಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಸಾವಿಗೀಡಾಗಿದ್ದಾನೆ ಎಂದು ಶಂಕಿಸಲಾಗಿದೆ.
ನೆಲಮಂಗಲ ಗ್ರಾಮಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.