ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕಲ್ಯಾಣಿಗೆ ತಡೆಗೋಡೆ ನಿರ್ಮಾಣದ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತಪಟ್ಟಿರುವ ಘಟನೆ ದೇವನಹಳ್ಳಿ ತಾಲೂಕಿನ ದಿನ್ನೂರು ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸಪುರ ಮೂಲದ ಆಂಜಿನಪ್ಪ (40) ಮೃತ ಕಾರ್ಮಿಕ. ಮಳೆಗಾಲವಾಗಿದ್ದರಿಂದ ನಿರ್ಮಾಣ ಹಂತದ ಕಲ್ಯಾಣಿ ಅಂಚಿನಲ್ಲಿ ಮಣ್ಣು ಕುಸಿಯುತ್ತಿತ್ತು. ಹೀಗಿದ್ದರೂ ಕೂಡ ಕಾಮಗಾರಿ ಮುಗಿಸುವ ತರಾತುರಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮುನಿಕೃಷ್ಣ ಹಾಗೂ ಗುತ್ತಿಗೆದಾರ ಕೆಲಸ ಮುಂದುವರೆಸಿದ್ದರು. ಇವರ ನಿರ್ಲಕ್ಷ್ಯದಿಂದಲೇ ಕಾರ್ಮಿಕ ಮೃತಪಟ್ಟಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.