ನೆಲಮಂಗಲ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗೃಹಿಣಿಯೋರ್ವಳು, ಅತಿಯಾದ ನೋವು ತಾಳಲಾರದೆ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲ ಪಟ್ಟಣದ ವಾಜರಹಳ್ಳಿಯಲ್ಲಿ ನಡೆದಿದೆ.
ಹೊಟ್ಟೆ ನೋವು ತಾಳಲಾರದೆ ನೇಣಿಗೆ ಶರಣಾದ ಗೃಹಿಣಿ - ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗೃಹಿಣಿ
ಹೊಟ್ಟೆ ನೋವು ತಾಳಲಾರದೆ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.
ನೇಣಿಗೆ ಶರಣಾದ ಗೃಹಿಣಿ
ವಾಜರಹಳ್ಳಿಯ ಶ್ವೇತಾ (29) ಮೃತ ಗೃಹಿಣಿ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆ ಅತಿಯಾದ ನೋವು ತಾಳಲಾರದೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ ಎಂದು ಮೃತ ಶ್ವೇತಾಳ ಪೋಷಕರು ತಿಳಸಿದ್ದಾರೆ.
ಘಟನೆ ಹಿನ್ನೆಲೆ, ಮೃತಳ ಶವಪರೀಕ್ಷೆ ಸಂದರ್ಭದಲ್ಲಿ ಭೇಟಿ ನೀಡಿದ ತಾಲೂಕು ದಂಡಾಧಿಕಾರಿ ಶ್ರೀನಿವಾಸಯ್ಯ, ಪೊಲೀಸರ ತನಿಖೆ ಮತ್ತು ಶವ ಪರೀಕ್ಷೆಯ ವರದಿ ಸಾವಿನ ನೈಜ ಕಾರಣ ತಿಳಿಸಲಿದೆ ಎಂದರು. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.