ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಟೋಲ್ ಸುಂಕ ಕೇಳಿದ್ದಕ್ಕೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆಂದು ಟೋಲ್ ಸಿಬ್ಬಂದಿ ರೈತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆದರೆ ರೈತ ಹೊಲದಲ್ಲಿ ಬೇಲಿ ಕತ್ತರಿಸಲು ಕಾರಿನಲ್ಲಿ ಮಚ್ಚು ತೆಗೆದುಕೊಂಡು ಹೋಗುತ್ತಿದ್ದಾಗ, ಟೋಲ್ ಸುಂಕ ಕಟ್ಟುವ ವಿಚಾರಕ್ಕೆ ಸಿಬ್ಬಂದಿ ಮತ್ತು ರೈತನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರೈತ ಮಚ್ಚು ತೋರಿಸಿದ್ದಾನೆಂಬ ಆರೋಪ ಕೇಳಿ ಬಂದಿದೆ.
ದೇವನಹಳ್ಳಿಯಲ್ಲಿ ಟೋಲ್ ಸುಂಕ ಕೇಳಿದ್ದಕ್ಕೆ ಮಚ್ಚು ತೋರಿಸಿದ ರೈತ: ಸಿಬ್ಬಂದಿ ಆರೋಪ - farmer threaten
ನೀನು ರೈತ ಎನ್ನುವುದಕ್ಕೆ ಸಾಕ್ಷಿ ಏನೆಂದು ಟೋಲ್ ಸಿಬ್ಬಂದಿ ಕೇಳಿದಾಗ, ಪ್ರತಿಯಾಗಿ ರೈತ ತನ್ನ ಹೊಲದಲ್ಲಿ ಬೇಲಿ ಕಡಿಯಲು ಹೋಗುತ್ತಿರುವುದಾಗಿ ಮಚ್ಚು ತೋರಿಸಿದ್ದಾನಂತೆ. ರೈತ ತಮಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆಂದು ಟೋಲ್ ಸಿಬ್ಬಂದಿ ಆರೋಪಿಸಿದ್ದಾರೆ.
![ದೇವನಹಳ್ಳಿಯಲ್ಲಿ ಟೋಲ್ ಸುಂಕ ಕೇಳಿದ್ದಕ್ಕೆ ಮಚ್ಚು ತೋರಿಸಿದ ರೈತ: ಸಿಬ್ಬಂದಿ ಆರೋಪ Toll staff and farmers](https://etvbharatimages.akamaized.net/etvbharat/prod-images/768-512-12247024-thumbnail-3x2-long.jpg)
Toll staff and farmers
ಟೋಲ್ ಸುಂಕ ಕೇಳಿದ್ದಕ್ಕೆ ಮಚ್ಚು ತೋರಿಸಿದನಂತೆ ರೈತ?
ಇದನ್ನೂ ಓದಿ:ರೇಖಾ ಕದಿರೇಶ್ Murder Case: ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ಚುರುಕು
ಚಿಕ್ಕಜಾಲ ಪೊಲೀಸರು ರೈತನನ್ನ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ನಂತರ ಆತನನ್ನು ಬಿಟ್ಟು ಕಳಿಸಲಾಗಿದೆ. ಸ್ಥಳೀಯ ರೈತರಿಗೆ ಟೋಲ್ ಸುಂಕ ಕಟ್ಟಲು ವಿನಾಯಿತಿ ಇದೆ. ಹೀಗಿರುವಾಗ ಸಿಬ್ಬಂದಿ ರೈತರನ್ನು ಟೋಲ್ ಕೇಳುವಂತಿಲ್ಲ, ಹಾಗೆಯೇ ರೈತ ಮಚ್ಚು ತೋರಿಸುವ ಪರಿಸ್ಥಿತಿ ಎದುರಾಗುವುದಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.