ಕರ್ನಾಟಕ

karnataka

ETV Bharat / state

ಇಟ್ಟಿಗೆ ಟೆಂಪೋ ಹರಿದು ಮಗು ಸಾವು - ಇಟ್ಟಿಗೆ ಟೆಂಪೋ ಹರಿದು ಮಗು ಸಾವು

ತಾಲೂಕಿನ ಗುಡ್ನಹಳ್ಳಿಯ ಲಕ್ಷ್ಮಿವೆಂಕಟೇಶ್ವರ ಸಿಮೆಂಟ್ ಹಾಲೋ ಬ್ಲಾಕ್ ಇಟ್ಟಿಗೆ ಕಾರ್ಖಾನೆಯಲ್ಲಿ ಟೆಂಪೋ ಹರಿದು ಒಂದು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಟ್ಟಿಗೆ ಟೆಂಪೋ ಹರಿದು ಮಗು ಸಾವು
A child died

By

Published : Dec 12, 2019, 11:32 PM IST

ಬೆಂಗಳೂರು/ಆನೇಕಲ್: ಟೆಂಪೋ ಹರಿದು ಒಂದು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಗುಡ್ನಹಳ್ಳಿಯ ಲಕ್ಷ್ಮಿವೆಂಕಟೇಶ್ವರ ಸಿಮೆಂಟ್ ಹಾಲೋ ಬ್ಲಾಕ್ ಇಟ್ಟಿಗೆ ಕಾರ್ಖಾನೆಯಲ್ಲಿ ನಡೆದಿದೆ.

ಇಟ್ಟಿಗೆ ಟೆಂಪೋ ಹರಿದು ಮಗು ಸಾವು

ಕಾರ್ಖಾನೆಯಲ್ಲಿ ಕಾರ್ಮಿಕ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಬಾಲಮಿಕಿ ಮತ್ತು ಶಕ್ತಿ ದಂಪತಿಗಳ ಮೂರನೇ ಮಗ ಸುಂದರ್ (1) ಸಾವನ್ನಪ್ಪಿರುವ ಮಗು. ಚಾಲಕ ಹಿಮ್ಮುಖವಾಗಿ ವೇಗವಾಗಿ ಚಲಿಸುವಾಗ ಮಗುವಿನ ಮೇಲೆ ಹರಿಸಿದ್ದಾನೆ. ಚಾಲಕನ ಅಜಾಗರೂಕತೆಯಿಂದ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸ್ ಭೇಟಿ ನೀಡಿದ್ದು, ಪ್ರಕರಣದ ಕುರಿತು ಪರಿಶೀಲಿಸಿ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details