ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಬೆಳಕಿಗಾಗಿ ಹಚ್ಚಿಟ್ಟಿದ್ದ ದೀಪದಿಂದ ಮನೆಗೆ ಬೆಂಕಿ ತಗುಲಿ ವೃದ್ಧರೋರ್ವರು ಮೃತಪಟ್ಟಿರುವ ಘಟನೆ ನಗರದ ಕಛೇರಿಪಾಳ್ಯದಲ್ಲಿ ನಡೆದಿದೆ. ಮೃತ ವೃದ್ಧರನ್ನು ರಾಮಾಂಜಿನಪ್ಪ(70) ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿಜೆ. ಮನೆಯಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಬೆಳಕಿಗಾಗಿ ದೀಪವನ್ನು ಹಚ್ಚಿಡಲಾಗಿತ್ತು. ದೀಪದ ಜ್ವಾಲೆಯು ಬಟ್ಟೆಗೆ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಮನೆಯೆಲ್ಲ ಆವರಿಸಿದೆ. ಮಲಗಿದ್ದ ರಾಮಾಂಜಿನಪ್ಪ ಅವರಿಗೆ ಎದ್ದೇಳಲು ಸಾಧ್ಯವಾಗದೇ ಬೆಂಕಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.