ದೊಡ್ಡಬಳ್ಳಾಪುರ: ನಗರದ ಸುತ್ತಮುತ್ತ ಗಾಂಜಾ ಮಾರಾಟ ಮಾಡುತ್ತಿದ್ದ ಪೆಡ್ಲರ್ಗಳ ಬೆನ್ನತ್ತಿದ ದೊಡ್ಡಬಳ್ಳಾಪುರ ಪೊಲೀಸರು ಆಂಧ್ರದಿಂದ ಸರಬರಾಜು ಆಗುತ್ತಿದ್ದ ಗಾಂಜಾ ಜಾಲವನ್ನ ಪತ್ತೆ ಮಾಡಿದ್ದಾರೆ.
ಜನವರಿ 21ರಂದು ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಕೋವಿಡ್ ಮಾರ್ಗಸೂಚಿಗೆ ಸಂಬಂಧಿಸಿದಂತೆ ಮಾಸ್ಕ್ ಹಾಕದವರಿಗೆ ಪೊಲೀಸರು ದಂಡ ಹಾಕುತ್ತಿದ್ದರು. ಈ ವೇಳೆ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ನಲ್ಲಿ ಬರುತ್ತಿದ್ದವರು ಪೊಲೀಸರನ್ನು ನೋಡಿ ಬೈಕ್ ತಿರುಗಿಸಿಕೊಂಡು ವಾಪಸ್ ಹೋಗುತ್ತಿದ್ದರು.
ಸಂಶಯದ ಹಿನ್ನೆಲೆ, ಮೂವರನ್ನು ಕರೆದು ತಪಾಸಣೆ ನಡೆಸಿದಾಗ ಅವರ ಬ್ಯಾಗ್ನಲ್ಲಿ 838 ಗ್ರಾಮ್ ಗಾಂಜಾ ಪತ್ತೆಯಾಗಿದೆ. ರಾಕೇಶ್, ಬಿ.ಕೆ.ರಂಗನಾಥ ಮತ್ತು ಧನುಷ್ ಎಂಬುವರನ್ನು ಬಂಧಿಸಿ ವಿಚಾರಣೆ ಮಾಡಲಾಗಿತು. ಈ ವೇಳೆ ಮಧುರೆ ದೇವಸ್ಥಾನ ಬಳಿ ಗಿರಾಕಿಯಿಂದ ಗಾಂಜಾ ಖರೀದಿಸಿ ದೊಡ್ಡಬಳ್ಳಾಪುರದಲ್ಲಿ ಮಾರಾಟ ಮಾಡಲು ಮುಂದಾಗಿದ್ದೆವು ಎಂದು ಆರೋಪಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಉಡುಪಿಯಲ್ಲಿ ಹಿಜಾಬ್, ಕೇಸರಿ ಶಾಲು ಪ್ರತಿಭಟನೆ : ಮಾರಕ ಆಯುಧಗಳೊಂದಿಗೆ ಬಂದಿದ್ದ ಇಬ್ಬರ ಬಂಧನ
ಮೂವರು ಆರೋಪಿಗಳ ಮಾಹಿತಿ ಮೇರೆಗೆ ಆಂಧ್ರದಿಂದ ಗಾಂಜಾ ತಂದು ಕೊಡುತ್ತಿದ್ದ ಹೇಮಂತ್ನನ್ನ ಬೆಂಗಳೂರಿನ ದೊಡ್ಡಬಿದರಕಲ್ಲಿನ ಬಳಿ ಬಂಧಿಸಿ, ಆತನಿಂದ 6 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.