ದೊಡ್ಡಬಳ್ಳಾಪುರ:ರಾಜ್ಯದಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಇಂದು ಹುಂಡಿ ಹಣ ಎಣಿಕೆ ನಡೆದಿದ್ದು, ಡಿಸೆಂಬರ್ ತಿಂಗಳೊಂದರಲ್ಲೇ 65,53,684 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜು ಮತ್ತು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಾದ ಜಿ.ಜೆ. ಹೇಮಾವತಿ ಮತ್ತು ದೇವಾಲಯದ ಪ್ರಧಾನ ಆರ್ಚಕರಾದ ಸುಬ್ರಮಣ್ಯ ಸ್ವಾಮಿಯವರ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು.