ಕರ್ನಾಟಕ

karnataka

By

Published : Sep 6, 2020, 10:12 AM IST

ETV Bharat / state

ದೊಡ್ಡಬಳ್ಳಾಪುರ ತಾಲೂಕಲ್ಲಿ ಕಳ್ಳರ ಕಾಟ... ಕಪ್ಪು ಪಲ್ಸರ್​ನಲ್ಲಿ ಬಂದಿದ್ದ ಖದೀಮರು ಸಿಸಿಟಿವಿಯಲ್ಲಿ ಸೆರೆ

ಕಳೆದ ಎರಡು ವಾರಗಳಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು, ದೊಡ್ಡಬಳ್ಳಾಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಯಲ್ಲಿ 3 ಕಳ್ಳತನ ಪ್ರಕರಣಗಳು ನಡೆದಿವೆ. ದಿನೇ ದಿನೇ ಹೆಚ್ಚಾಗುತ್ತಿರುವ ಈ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿವೆ.

Doddaballapur Taluk Theft cases
ಕಪ್ಪು ಪಲ್ಸರ್​ನಲ್ಲಿ ಬಂದಿದ್ದ ಕಳ್ಳರು ಸಿಸಿಟಿವಿಯಲ್ಲಿ ಸೆರೆ

ದೊಡ್ಡಬಳ್ಳಾಪುರ:ಎರಡು ವಾರಗಳಿಂದ ತಾಲೂಕಿನಲ್ಲಿ ಸರಣಿ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಕಪ್ಪು ಪಲ್ಸರ್​ನಲ್ಲಿ ಬಂದಿದ್ದ ಕಳ್ಳರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳ್ಳರ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಆಗಸ್ಟ್ 25 ರಂದು ಹಾಡೋನಹಳ್ಳಿ ರುದ್ರಪ್ಪ ಎಂಬುವರ ಮನೆಯರು ದೇವಾಲಯಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಒಳ ನುಗ್ಗಿದ ಕಳ್ಳರು ನಗದು ಮತ್ತು ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ. ಅದೇ ದಿನ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಕಳ್ಳತನ ಪ್ರಕರಣ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳ್ಳರ ಕಾಟ

ಕೆಲಸದ ನಿಮಿತ್ತ ಮನೆಯ ಎಲ್ಲಾ ಸದಸ್ಯರು ಹೊರಗೆ ಹೋಗಿರುವುದನ್ನು ಗಮನಿಸಿ ನಗದು ಮತ್ತು ಚಿನ್ನಾಭರಣವನ್ನು ದೋಚಿದ್ದಾರೆ. ಸೆಪ್ಟೆಂಬರ್ 1 ರಂದು ದೊಡ್ಡಬಳ್ಳಾಪುರ ನಗರ ಠಾಣೆ ವ್ಯಾಪ್ತಿಯ ಬಸವೇಶ್ವರ ನಗರದ ರಾಜಣ್ಣ ಎಂಬುವರ ಮನೆಯ ಬೀಗ ಮುರಿದು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

ಸೆಪ್ಟೆಂಬರ್ 3 ರ ರಾತ್ರಿ ನಗರದ ಅರಣ್ಯ ಇಲಾಖೆ ಮುಂಭಾಗದ ಅಂಗಡಿಗಳ ಬಾಗಿಲು ಮೀಟಿ ಸರಣಿ ಕಳ್ಳತನ ನಡೆಸಲಾಗಿದೆ. ಸೆಪ್ಟೆಂಬರ್ 4ರ ರಾತ್ರಿ ನಗರದ ಎಲ್ಐಸಿ ಕಚೇರಿ ಪಕ್ಕದಲ್ಲಿನ ಅಂಗಡಿಗಳ ಬಾಗಿಲು ಮೀಟಿ ಸರಣಿ ಕಳ್ಳತನ ನಡೆಸಿದ್ದಾರೆ. ಕಳೆದ ಎರಡು ವಾರದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಕಳ್ಳತನ ಪ್ರಕರಣ, ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ 3 ಕಳ್ಳತನ ಪ್ರಕರಣ ನಡೆದಿವೆ.

ಕಳ್ಳತನ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿವೆ. ವಿಶೇಷ ತಂಡ ರಚಿಸಿ ಕಳ್ಳರ ಬೆನ್ನತ್ತಿರುವ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಆಗಸ್ಟ್ 25ರಂದು ಹಾಡೋನಹಳ್ಳಿಯಲ್ಲಿ ಮನೆಗಳ್ಳತನ ನಡೆಸಿ ಬ್ಲ್ಯಾಕ್ ಪಲ್ಸರ್​ನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ABOUT THE AUTHOR

...view details