ನೆಲಮಂಗಲ:ತಾಲೂಕಿನ ಬೈರನಾಯಕನಹಳ್ಳಿಯ ಕುವೆಂಪು ಪ್ರಥಮ ದರ್ಜೆ ಕಾಲೇಜು ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ನಡೆಸಲಾದ ರಾಷ್ಟ್ರೀಯ ಸೇವಾ ಯೋಜನೆಯ 50ನೇ ಸುವರ್ಣ ಮಹೋತ್ಸವದ ಅಂಗವಾಗಿ ವಾರ್ಷಿಕ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಥಿಗಳ ಶಿಸ್ತುಬದ್ಧ ಜೀವನ ರೂಪಿಸಲು ಎನ್ಎಸ್ಎಸ್ ಸಹಕಾರಿ: ನರಸಿಂಹಮೂರ್ತಿ - ರಾಷ್ಟ್ರೀಯ ಸೇವಾ ಯೋಜನೆಯ 50ನೇ ಸುವರ್ಣ ಮಹೋತ್ಸ
ನೆಲಮಂಗಲದಲ್ಲಿ ಸರ್ಕಾರಿ ಕಾಲೆಜುಗಳ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ 50ನೇ ಸುವರ್ಣ ಮಹೋತ್ಸವದ ಅಂಗವಾಗಿ ವಾರ್ಷಿಕ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ.
ಸುಮಾರು ಏಳು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಸೇವಾ ಯೋಜನೆಯ ಮೊದಲ ದಿನದಂದು ದೀಪ ಬೆಳಗಿಸುವ ಮೂಲಕ ಗಣ್ಯರು ಶಿಬಿರಕ್ಕೆ ಚಾಲನೆ ನೀಡಿದರು. ಇದಕ್ಕೆ ತಕ್ಕಂತೆ ಆಗಮಿಸಿದ್ದ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಗೆ ಸಾಥ್ ನೀಡಿದರು. ವಿದ್ಯಾರ್ಥಿಗಳಿಗೆ ಯೋಜನೆಯ ಮಹತ್ವ ಕುರಿತಂತೆ ಬೋಧನೆಯ ಜೊತೆಗೆ ಸ್ವಚ್ಛತೆ ಹಾಗೂ ದೇಶದ ಅಭಿವೃದ್ಧಿಯ ಇನ್ನಿತರ ವಿಚಾರಗಳನ್ನು ತಿಳಿಸಲಾಯಿತು.
ಹಸಿರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಗ್ರಾಮೀಣ ಶುಚಿತ್ವವೇ ದೇಶದ ಸುರಕ್ಷೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಸರ್ಕಾರ ಶೇ. 40ರಷ್ಟು ಹಣ ವ್ಯಯಿಸುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಸದೃಢ ಭಾರತವನ್ನು ಕಟ್ಟುವ ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಇಂತಹ ರಾಷ್ಟ್ರೀಯ ಸೇವಾ ಯೋಜನೆಗಳು ಅಗತ್ಯ ಎಂದರು.